Asianet Suvarna News Asianet Suvarna News

ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ವಾಮಾಚಾರ: ಪುನುಗುಬೆಕ್ಕು ಕೊಂದು ಹೂತಿಟ್ಟ ಕೊಳ್ಳೇಗಾಲ ಮಾಂತ್ರಿಕರು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಶಾಸಕರಾಗಿ ಆಯ್ಕೆಯಾಗಬಾರದೆಂದು ಅವರ ವಿರುದ್ಧ ಕೊಳ್ಳೇಗಾಲದಿಂದ ಮಾಂತ್ರಿಕರನ್ನು ಕರೆಸಿ ವಾಮಾಚಾರ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗ (ಮೇ 15): ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಶಾಸಕರಾಗಿ ಆಯ್ಕೆಯಾಗಬಾರದೆಂದು ಅವರ ವಿರುದ್ಧ ಕೊಳ್ಳೇಗಾಲದಿಂದ ಮಾಂತ್ರಿಕರನ್ನು ಕರೆಸಿ ವಾಮಾಚಾರ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ಗೆಲ್ಲದಂತೆ ದುಷ್ಟ ಶಕ್ತಿಗಳಿಂದ ವಾಮಾಚಾರ ಮಾಡಲಾಗಿದೆ. ನಮ್ಮ ತೋಟದ ಮನೆಯಲ್ಲಿ ಪುನುಗುಬೆಕ್ಕು ಬಳಸಿ ವಾಮಾಚಾರ ಮಾಡಲಾಗಿದೆ. ತೋಟದಲ್ಲಿ ವಾಮಾಚಾರ ನಡೆಸಿ ಪುನುಗು ಬೆಕ್ಕನ್ನ ಹೂತು ಹಾಕಿದ್ದಾರೆ. ಕೊಳ್ಳೆಗಾಲದಂತಹ ಭಾಗಗಳಲ್ಲಿ ಈ ಬೆಕ್ಕುಗಳನ್ನು ವಾಮಾಚಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ. ವಾಮಾಚಾರ ನಡೆದ ಬಗ್ಗೆ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ಸರ್ವೆನಂಬರ್ 36 ರಲ್ಲಿರುವ ಅಡಿಕೆ ತೋಟದಲ್ಲಿ ನಡೆದಿದ್ದ ವಾಮಾಚಾರ ಮಾಡಿದ್ದಾರೆ ಎಂದು ಹೇಳಿದರು.

ತೋಟದಲ್ಲಿ ವಾಮಾಚಾರ ಮಾಡಿದವರ ವಿರುದ್ಧ ದೂರು: ರಾಜ್ಯದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವುದಕ್ಕೆ ಅವಕಾಶವಿಲ್ಲ. ಕಾಡು ಪ್ರಾಣಿಯನ್ನ ಕೊಂದು ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್.ಕೆ. ರಮೇಶ್ ಅವರು ದೂರು ದಾಖಲು ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಮತದಾನ ನಡೆದ ನಡೆದ ಮೇ 11 ರಂದು ವಾಮಾಚಾರ ನಡೆದಿರುವ ಬಗ್ಗೆ ರಮೇಶ್ ಗಮನಕ್ಕೆ ಬಂದಿದೆ. ಮೇ 12 ರಂದು ದೂರು ದಾಖಲಿಸಿ ತನಿಖೆ ಮಾಡಲು ಕೋರಿದ್ದಾರೆ. 

Video Top Stories