ವಿಕ್ರಮನ ಪರಾಕ್ರಮದ ಹಿಂದೆ ಸ್ತ್ರೀ ಶಕ್ತಿ ಬಲ: ಯಶಸ್ವಿ ಚಂದ್ರಯಾನಕ್ಕೆ ಮಹಿಳೆಯರ ಕೊಡುಗೆ !

ಚಂದ್ರಯಾನ -3 ಯಶಸ್ಸಿನ ಹಿಂದೆ 54 ಮಹಿಳಾ ವಿಜ್ಞಾನಿಗಳು ಇದ್ದಾರೆ. ರಿತು ಕರಿದಾಲ್ ಚಂದ್ರಯಾನ -3 ಯೋಜನೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ.
 

First Published Aug 24, 2023, 9:23 AM IST | Last Updated Aug 24, 2023, 9:23 AM IST

ಚಂದ್ರಯಾನ - 3 ಭಾರತವನ್ನ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಭಾರತ ಏನು ಮಾಡುತ್ತೆ ಎಂದು ನೋಡ್ತಿದ್ದ ದಿಗ್ಗಜ ರಾಷ್ಟ್ರಗಳು ನಿಬ್ಬೆರಗಾಗಿ ನಿಂತಿವೆ. ಮನೆ, ಕುಟಂಬವನ್ನು ಮಾತ್ರ ಯಶಸ್ವಿಯಾಗಿ ನಿರ್ವಹಿಸಬಲ್ಲಳು ಎನ್ನುತ್ತಿದ್ದ ಮಹಿಳೆ, ಈಗ ಬಾಹ್ಯಾಕಾಶ(space) ವಿಜ್ಞಾನದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಚಂದ್ರಯಾನ 3ರ(Chandrayaan-3) ಯಶಸ್ಸಿನ ಹಿಂದೆ ನೂರಾರು ಮಹಿಳೆಯರ ಶ್ರಮವಿದೆ. ರಿತು ಕರಿದಾಲ್ ಚಂದ್ರಯಾನ -3 ಯೋಜನೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಇಂಡಿಯನ್ ರಾಕೆಟ್ ವುಮೆನ್(Rocket Women) ಎಂದೇ ಖ್ಯಾತಿ ಪಡೆದಿರುವ ರಿತು, 2014ರ ಮಂಗಳಯಾನದ ಉಪ ಕಾರ್ಯಾಚರಣೆ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಚಂದ್ರಯಾನ-3ರ ಮೇಲ್ವಿಚಾರಕಿಯಾಗಿದ್ದಾರೆ. ಚಂದ್ರಯಾನ -3 ಯಶಸ್ಸಿನ ಹಿಂದೆ ಬರೋಬ್ಬರಿ 54ಕ್ಕೂ ಹೆಚ್ಚು ಮಹಿಳಾ ವಿಜ್ಞಾನಿಗಳು(Women scientists) ಶ್ರಮವಹಿಸಿದ್ದಾರೆ. ಪ್ರತ್ಯೇಕ ಸಿಸ್ಟಮ್‌ಗಳ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್‌ಗಳಾಗಿ 54 ಮಹಿಳಾ ವಿಜ್ಞಾನಿಗಳು ಕಾರ್ಯ ನಿರ್ವಹಿಸಿದ್ದಾರೆ. ಚಂದ್ರನ ಮೇಲೆ ವಿಕ್ರಮನ ಪರಾಕ್ರಮ ಬೀರುವ ಹಿಂದೆ ಅಪಾರ ಸ್ತ್ರೀ ಶಕ್ತಿಯ ಬಲವಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದಿನ ನಿಮ್ಮ ರಾಶಿ ಭವಿಷ್ಯ ಹೀಗಿದ್ದು, ಮಿಥುನ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ಲಾಭ