ರೌಡಿ ಶೀಟರ್‌ ಕಪಿಲ್‌ ಭೀಕರ ಹತ್ಯೆ: ಕ್ಯಾಮೆರಾ ಕಣ್ಣಲ್ಲಿ ಹಂತಕರ ಕೌರ್ಯ

ರೌಡಿ ಶೀಟರ್‌ ಕಪಿಲ್‌ ಮೇಲೆ ಜುಲೈ 11ರ ರಾತ್ರಿ ಅಟ್ಯಾಕ್ ಮಾಡಿದ ನಾಲ್ಕೈದು ಮಂದಿ ಮಾರಕಾಸ್ತ್ರಗಳಿಂದ ಕೊಚ್ಚಿ ಆತನನ್ನು ಕೊಂದಿದ್ದಾರೆ. 
 

First Published Jul 14, 2023, 9:33 AM IST | Last Updated Jul 14, 2023, 9:33 AM IST

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದ ರೌಡಿ ಶೀಟರ್‌ ಕಪಿಲ್‌ನನ್ನು(Rowdy sheeter Kapil) ಬರ್ಬರವಾಗಿ ಹತ್ಯೆ(Murder) ಮಾಡಲಾಗಿದೆ. ಹಂತಕರು ಆತನನ್ನು ಅಟ್ಟಾಡಿಸಿ ಕೊಂದಿದ್ದಾರೆ. ಈ ಡೆಡ್ಲಿ ಅಟ್ಯಾಕ್‌ನ ಸಿಸಿಟಿವಿ ದೃಶ್ಯ ಈಗ ವೈರಲ್‌ ಆಗುತ್ತಿದೆ. ಜುಲೈ 11 ರಂದು ಆರೋಪಿಗಳು ಕಪಿಲ್ ಮೇಲೆ ಅಟ್ಯಾಕ್‌ ಮಾಡಿ, ಆತನನ್ನು ಹತ್ಯೆ ಮಾಡಿದ್ದರು. ಮುಖಕ್ಕೆ ಮಾಸ್ಕ್‌, ಹೆಲ್ಮೆಟ್‌ ಧರಿಸಿದ್ದ ಆರೋಪಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕಪಿಲ್‌ ಮೇಲೆ ಹಲ್ಲೆ(Attack) ಮಾಡಿದ್ದರು. ಜೀವವನ್ನು ಉಳಿಸಿಕೊಳ್ಳಲು ಕಪಿಲ್‌ ಕೊನೆ ಹಂತದವರೆಗೂ ಯತ್ನಿಸಿದ್ರು, ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ. ಸುಮಾರು ನೂರು ಮೀಟರ್ ಅಟ್ಟಾಡಿಸಿಕೊಂಡು ಹೋಗಿ ಮನಸೋ ಇಚ್ಚೆ ಕತ್ತರಿಸಿದ್ದಾರೆ.ಸಿಟಿ ಮಾರ್ಕೆಟ್, ಹೆಬ್ಬಾಳ, ಮಡಿವಾಳ ಸೇರಿ ಹಲವು ಠಾಣೆಗಳಲ್ಲಿ ಕಪಿಲ್ ಮೇಲೆ ಕೇಸ್‌ಗಳು ದಾಖಲಾಗಿದೆ.

ಇದನ್ನೂ ವೀಕ್ಷಿಸಿ:  ಈ ಮಕ್ಕಳು ಆಡುವ ಆಟ ಹೇಗಿದೆ ನೋಡಿ...ಅಬ್ಬಾ..! ನೋಡಿದ್ರೆ ಮೈ ಜುಮ್‌ ಎನ್ನುತ್ತೆ..!

Video Top Stories