Asianet Suvarna News Asianet Suvarna News

ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ: ಭಾರತದ ಸಾಧನೆಗೆ ಇಡೀ ವಿಶ್ವವೇ ಮೆಚ್ಚುಗೆ..!

ಚಂದ್ರನ ಅಂಗಳದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡ್ ಆಗೋ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದೆ. ಇಸ್ರೋದ ಈ ಸಾಧನೆಗೆ ಪ್ರಪಂಚದ ಪ್ರತಿಕೆಗಳೇ ಶಹಬ್ಬಾಸ್ ಅಂತಿವೆ.
 

ಚಂದ್ರಯಾನ -3 ಇಡೀ ವಿಶ್ವವೇ ಭಾರತದತ್ತ ಕಣ್ಣು ಅರಳಿಸಿ ನೋಡುತ್ತಿದ್ದ ಕ್ಷಣ. ಜಗತ್ತೇ ಇಂಡಿಯಾ ಏನ್ ಮಾಡುತ್ತೆ ಅಂತಾ ಕುತೂಹಲದಿಂದ ಕಾಯುತ್ತಿದ್ದ ಸಮಯ. ಕೊನೆಗೂ ಇಡೀ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ಭಾರತ(India) ವಿಜ್ಞಾನಿಗಳು ಮಾಡಿದ್ದಾರೆ. ಚಂದ್ರನ ಅಂಗಳದಲ್ಲಿ ಇಸ್ರೋದ(ISRO) ವಿಕ್ರಮ ಲ್ಯಾಂಡ್‌ ಆಗ್ತಿದ್ದಂತೆ ಈ ಸಾಧನೆಗೆ ಪ್ರಪಂಚವೇ ಶಹಬ್ಬಾಸ್ ಅಂತಿದೆ. ಚಂದ್ರಯಾನ-3 ಭಾರತದ ಇಸ್ರೋ ವಿಜ್ಞಾನಿಗಳ 4 ವರ್ಷಗಳ ಕನಸು. ಈ ಯೋಜನೆ ಯಶಸ್ಸಿಗೆ ಹಗಲಿರುಳು ಊಟ, ನಿದ್ದೆ ಬಿಟ್ಟು ಸಾವಿರಾರು ವಿಜ್ಞಾನಿಗಳು ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಬುಧವಾರ ಸಂಜೆ 6:04ಗಂಟೆಗೆ ಚಂದ್ರನ ಮೇಲೆ ವಿಕ್ರಮ್  ಲ್ಯಾಂಡ್ ಆಗ್ತಿದ್ದಂತೆ. ಭಾರತ ಸಾಧನೆಯನ್ನ ಅಮೆರಿಕ(America), ಪಾಕಿಸ್ತಾನ, ಇಂಗ್ಲೆಡ್ ಪತ್ರಿಕೆಗಳು ಗುಣಗಾನ ಮಾಡಿವೆ. ದಿ ನ್ಯೂಯಾರ್ಕ್ ಟೈಮ್ಸ್, ದಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಬಿಬಿಸಿ ಸೇರಿದಂತೆ ಅನೇಕ ಪ್ರಮುಖ ಪತ್ರಿಕೆಗಳು ಚಂದ್ರಯಾನ- 3ರ(Chandrayaan 3 ) ಐತಿಹಾಸಿಕ ಲ್ಯಾಂಡಿಂಗ್‌ನ ಪ್ರಶಂಸಿಸಿವೆ. ಇತ್ತೀಚಿನ ಚಂದ್ರನ ರೇಸ್‌ನಲ್ಲಿ, ಚಂದ್ರನ ದಕ್ಷಿಣ ಪ್ರದೇಶದಲ್ಲಿ ಭಾರತ ಮೊದಲ ಬಾರಿಗೆ ಇಳಿದಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ರೆ.ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡ್ ಆಗಿ ಭಾರತ ಚರಿತ್ರೆ ಸೃಷ್ಟಿಸಿದೆ ಅಂತಾ ಬಿಬಿಸಿ ಬಣ್ಣಿಸಿದೆ. ಚಂದ್ರಯಾನ-3 ಯಶಸ್ವಿಗೆ ಭಾರತವು ಬಾಹ್ಯಾಕಾಶ ಶಕ್ತಿಯಾಗಿ ಬೆಳೆಗ ಸಂಕೇತ ಅಂತಾ ಇಂಗೆಂಡ್ ಪತ್ರಿಕೆ ಗಾರ್ಡಿಯನ್ ವರದಿಯಲ್ಲಿ ಶ್ಲಾಘಿಸಲಾಗಿದೆ.ಇತ್ತ ಚಂದ್ರಯಾನ- 3ರ ಲ್ಯಾಂಡಿಂಗ್ ಯಾವುದೇ ದೇಶ ಮಾಡದ ಸಾಧನೆ ಮಾಡಿದೆ ಅಂತಾ ಸಿಎನ್‌ಎನ್‌ ಹೇಳಿದ್ರೆ..ಇತ್ತ ಪಕ್ಕದ ದೇಶ ಪಾಕಿಸ್ತಾನದ ಡಾನ್ ಪೇಪರ್ ಕೂಡ ಭಾರತದ ಸಾಧನೆಯನ್ನ ಕೊಂಡಾಡಿದೆ.

ಇದನ್ನೂ ವೀಕ್ಷಿಸಿ:  ವಿಕ್ರಮನ ಪರಾಕ್ರಮದ ಹಿಂದೆ ಸ್ತ್ರೀ ಶಕ್ತಿ ಬಲ: ಯಶಸ್ವಿ ಚಂದ್ರಯಾನಕ್ಕೆ ಮಹಿಳೆಯರ ಕೊಡುಗೆ !

Video Top Stories