ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?

ಭಾರತದ ಭೂಮಿಯನ್ನು ತಲುಪುವ ಸೂರ್ಯನ ಬೆಳಕಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಮಾನವ ನಿರ್ಮಿತ ಎರಡು ದುಷ್ಟ ಶಕ್ತಿಗಳು ಸೂರ್ಯನ ಕಿರಣಗಳನ್ನು ತಡೆಯುತ್ತಿದ್ದು, ಇದು ದೇಶದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Share this Video
  • FB
  • Linkdin
  • Whatsapp

 ಭಾರತದ ಮೇಲೆ ಸೂರ್ಯ ದೇವನ ಮುನಿಸು ! - ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬರೀ ಕತ್ತಲು..! - ಸೂರ್ಯನ ಬೆಳಕನ್ನೇ ತಡೆದ ಆ ದುಷ್ಟ ಶಕ್ತಿ ಯಾವುದು ? - ಇದು ಉತ್ತರಾಯಣ ದಕ್ಷಿಣಯಾಣದ ಕಥೆಯಲ್ಲ..! ಇದೇ ಈ ಹೊತ್ತಿನ ವಿಶೇಷ.. ಭಾರತಕ್ಕೆ ಸೂರ್ಯ ಶಾಪ..!

ಜಗತ್ತಿಗೆ ಸೂರ್ಯನ ಬೆಳಕು ತುಂಬಾನೇ ಅತ್ಯಗತ್ಯ.. ಈ ಭೂಮಿ ಮೇಲಿನ ಪ್ರತಿಯೊಂದು ಜೀವರಾಶಿಯೂ ಬದುಕುಳಿಯೋದಕ್ಕೆ ಆ ಒಂದು ಶಕ್ತಿಯೇ ಕಾರಣ.. ಆದ್ರೆ, ಆ ಶಕ್ತಿಯನ್ನೇ ಎರಡು ದುಷ್ಟ ಶಕ್ತಿಗಳು ತಡೆದು ನಿಲ್ಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿವೆ.. ಮುಂದಿನ ದಿನಗಳಲ್ಲಿ ಆ ದುಷ್ಟಶಕ್ತಿಯ ಬಲ ಇನ್ನು ಹೆಚ್ಚಾಗಲಿದ್ದು, ಅವುಗಳ ಆಟಾಟೋಪಕ್ಕೆ ಸೂರ್ಯನ ಬೆಳಕು ಭೂಮಿಯನ್ನೇ ತಲುಪದೆ ಇರಬಹುದು.. ಅಷ್ಟಕ್ಕೂ ಆ ದುಷ್ಟಶಕ್ತಿಗಳು ಯಾವುವು.. ಸೂರ್ಯನ ಮೇಲೇಕೆ ಹಗೆ ಸಾಧಿಸುತ್ತಿವೆ ಅನ್ನೋ ಡೀಟೈಲ್​​ ಇಲ್ಲಿದೆ ನೋಡಿ..

ಭಾರತದ ಮೇಲೆ ಸೂರ್ಯ ಮುನಿಸಿಕೊಂಡಿಲ್ಲ.. ಬದಲಾಗಿ ಸೂರ್ಯನೇ ಭಾರತದ ಭೂಮಿಯನ್ನು ತಲುಪದಂತೆ ನಾವೇ ತಡೆಯೊಡ್ಡಿದ್ದೇವೆ.. ಎರಡು ದುಷ್ಟ ಶಕ್ತಿಗಳನ್ನು ಬೆಳೆಸುವ ಮೂಲಕ ಅವುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದೇವೆ.. ಪರಿಣಾಮ ಈಗ ನಮಗೆ ದೊಡ್ಡ ಮಟ್ಟದಲ್ಲಿ ಕಾಣಿಸದೇ ಇರಬಹುದು.. ಆದರೆ ಮುಂದೆ ಏನೇನಾಗುತ್ತದೋ.

ಸೂರ್ಯನ ಬೆಳಕು ಭಾರತದ ಮೇಲ್ಮೈ ತಲುಪುವುದು ಕಡಿಮೆಯಾಗುತ್ತಿದೆ.. ಅದನ್ನು ತಡೆಯುತ್ತಿರುವ ದುಷ್ಟ ಶಕ್ತಿ ಯಾವುದು? ಆ ದುಷ್ಟ ಶಕ್ತಿಗಳ ಆರ್ಭಟ ಹೇಗಿದೆ.. ಮುಂದಿನ ದಿನಗಳಲ್ಲಿ ಭಾರತದ ಪರಿಸ್ಥಿತಿ ಏನೇನಾಗುತ್ತದೆ. ಭಾರತದ ಮೇಲ್ಮೈ ಮೇಲೆ ಸೂರ್ಯನ ಬೆಳಕು ಕಡಿಮೆಯಾಗುತ್ತಿದೆ ಅನ್ನೋದನ್ನ ವಿಜ್ಞಾನಿಗಳು ಈಗಾಗಲೇ ಕಂಡುಹಿಡಿದು ಹೇಳಿದ್ದಾರೆ.. ಹಾಗಂತ ಈ ಅಧ್ಯಾಯನ ಮುಗಿದು ಹೋಯ್ತಾ..? ಖಂಡಿತಾ ಇಲ್ಲ.. ವಿಜ್ಞಾನಿಗಳ ಕೆಲಸ ಈಗಷ್ಟೆ ಆರಂಭವಾಗಿದೆ.. ಇದು ಭಾರತದ ಭವಿಷ್ಯಕ್ಕೆ ಎಷ್ಟು ಅಗತ್ಯ ಅನ್ನೋ ಡಿಟೇಲ್ ಈ ವೀಡಿಯೋದಲ್ಲಿದೆ. 

Related Video