ಪ್ರಾಣಿಗಳು ಸಸ್ಯ ತಿನ್ನೋದು ಗೊತ್ತು, ಸಸ್ಯಗಳು ಮಾಂಸ ತಿನ್ನೋದು ಗೊತ್ತಾ?

ಕೆಲ ದಿನಗಳ ಹಿಂದೆ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ  ಮಾಂಸ ಭಕ್ಷಕ ಸಸ್ಯವೊಂದು ಕಾಣಿಸಿಕೊಂಡಿದೆ. ಈ ಸಸ್ಯ ಪ್ರಭೇದದ ಬಗ್ಗೆ ಈ ವಿಡಿಯೋದಲ್ಲಿದೆ ಡಿಟೇಲ್ಸ್‌

First Published Sep 16, 2022, 3:28 PM IST | Last Updated Sep 16, 2022, 3:28 PM IST

ನವದೆಹಲಿ: ಮನುಷ್ಯರು ಸಸ್ಯಗಳನ್ನು ಹಾಗೂ ಮಾಂಸವನ್ನು ತಿನ್ನುವುದನ್ನು ನೋಡಿದ್ದೇವೆ. ಕೆಲವು ಪ್ರಾಣಿಗಳು ಸಸ್ಯವನ್ನು ಮತ್ತೆ ಕೆಲವು ಪ್ರಾಣಿಗಳು ಕೇವಲ ಮಾಂಸವನ್ನು ತಿನ್ನುವುದನ್ನು ನೋಡಿದ್ದೇವೆ. ಆದರೆ ಸಸ್ಯಗಳಲ್ಲೂ ಮಾಂಸಾಹಾರಿ ಸಸ್ಯಗಳಿವೆ ಎಂಬುದು ನಿಮಗೆ ಗೊತ್ತೆ. ವಿಚಿತ್ರ ಎನಿಸಿದರು ಇದು ಸತ್ಯ, ಕೆಲವು ಮಾಂಸಾಹಾರಿ ಸಸ್ಯಗಳು ಕೂಡ ಈ ಭೂಮಿಯ ಮೇಲಿವೆ. ಇತ್ತೀಚೆಗೆ ಉತ್ತರಾಖಂಡ್‌ನಲ್ಲಿ ಮಾಂಸಹಾರಿ ಗಿಡವೊಂದು ಕಾಣಿಸಿಕೊಂಡಿದೆ. ಹುಳ ಹುಪ್ಪಡಿಗಳೇ ಇದರ ಆಹಾರವಾಗಿದೆ. Utricularia Furcellata ಹೆಸರಿನಿಂದ ಕರೆಯಲ್ಪಡುವ ಈ ಕೀಟ ಉತ್ತರಾಖಂಡ್ನ ಚಮೋಲಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಏನಿದರ ವಿಶೇಷತೆ ಗೊತ್ತಾ ಈ ವಿಡಿಯೋ ನೋಡಿ.