Asianet Suvarna News Asianet Suvarna News

ತೆರೆ ಮೇಲೆ ತೆರೆದುಕೊಳ್ತಿದೆಯಾ ಕೆಂಪೇಗೌಡರ ಚರಿತ್ರೆ?: ಅಣ್ಣವ್ರ ಮನೆ ಕದ ತಟ್ಟಿದೆ ಈ ಪಾತ್ರ..!

ಕನ್ನಡದಲ್ಲಿ ಸಿದ್ಧವಾಗುತ್ತಾ ಐತಿಹಾಸಿಕ ಸಿನಿಮಾ?
ರಾಷ್ಟ್ರ ಪ್ರಶಸ್ತಿ ಸರದಾರನಿಂದ ಚಿತ್ರ ನಿರ್ಮಾಣಕ್ಕೆ ಪ್ಲಾನ್!
ಅಣ್ಣವ್ರ ಮನೆ ಕದಾ ತಟ್ಟಿದೆ ಕೆಂಪೇಗೌಡರ ಪಾತ್ರ.!

First Published Jun 23, 2023, 2:16 PM IST | Last Updated Jun 23, 2023, 2:19 PM IST

ಕನ್ನಡದಲ್ಲಿ ಐತಿಹಾಸಿಕ ಸಿನಿಮಾ ನೋಡಿ ಯಾವ್ ಕಾಲ ಆಯ್ತು ಅಲ್ವಾ. ಐತಿಹಾಸಿಕ ಸಿನಿಮಾಗಳ ಟೈಂ ಇದ್ದಿದ್ದು ಡಾಕ್ಟರ್ ರಾಜ್‌ಕುಮಾರ್ ಕಾಲದಲ್ಲಿ ಮಾತ್ರ. ಅಣ್ಣಾವ್ರು ಅದೆಂತೆಂಥಾ ಸಿನಿಮಾ ಮಾಡಿ ನಮ್ಮನ್ನ ರಂಜಿಸಿದ್ದಾರೆ ಅಲ್ವಾ. ಅಂತಹ ಸಿನಿಮಾಗಳನ್ನ ಈಗಿನ ಹೀರೋಗಳು ಯಾಕ್ ಮಾಡಲ್ಲ. ಇಂತದ್ದೊಂದು ಚರ್ಚೆ ಸ್ಯಾಂಡಲ್‌ವುಡ್ ಸಿನಿ ಪ್ರೇಕ್ಷಕರು ತಮ್ಮ ಪಡಸಾಲೆಯಲ್ಲಿ ಆಗಾಗ ಚರ್ಚೆ ಮಾತಾಡ್ತಿರ್ತಾರೆ. ಇದೀಗ ಐತಿಹಾಸಿಕ ಸಿನಿಮಾ ನೋಡೋ ಚಾನ್ಸ್ ಒಂದು ಕನ್ನಡಿಗರದ್ದಾಗ್ತಾ ಇದೆ. ನಾಡ ಪ್ರಭು ಕೆಂಪೇಗೌಡರ ಚರಿತ್ರೆ ತೆರೆ ಮೇಲೆ ತೆರೆದುಕೊಳ್ಳಿದೆಯಂತೆ.ಕೆಂಪೇಗೌಡ ಕುರಿತಾದ ಸಿನಿಮಾ ಮಾಡುವ ಅವಕಾಶ ದೊಡ್ಮನೆವರೆಗೂ ಹೋಗಿದೆ.ಸದ್ಯ ಸಿನಿಮಾ ರಂಗದಲ್ಲಿ ಲೈಫ್ ಕಟ್ಟಿಕೊಳ್ಳೊ ಭರವಸೆ ಮೂಡಿಸಿರೋ ಯುವರಾಜ್ ಕುಮಾರ್ ಹೆಸರು ಈಗ ಕೇಳಿಸುತ್ತಿದೆ.

ಇದನ್ನೂ ವೀಕ್ಷಿಸಿ: ಉಚಿತ ಬಸ್‌ ಪ್ರಯಾಣ ಎಫೆಕ್ಟ್‌: ಬೀದರ್‌ನಲ್ಲಿ ಸೀಟಿಗಾಗಿ ನಾರಿಮಣಿಯರ ಕಿತ್ತಾಟ !

Video Top Stories