ಚೊಚ್ಚಲ ಸಿನಿಮಾ ಬಗ್ಗೆ ದೊಡ್ಮನೆ ಕುಡಿ ಹೇಳಿದ್ದೇನು? ಯುವ ಚಿತ್ರ ಶುರುವಾಗಿದ್ದು ಹೇಗೆ? ಇದಕ್ಕೆ ಕಾರಣ ಯಾರು?

ಅಪ್ಪು,ಶಿವಣ್ಣಗೆ ಸಕ್ಸಸ್ ಕೊಟ್ಟ ಥಿಯೇಟರ್‌ನಲ್ಲೇ ‘ಯುವ’ ಪ್ರದರ್ಶನ..!
‘ಯುವ ಸಿನಿಮಾ ಆಗಿದ್ದೇ ಅವರಿಂದ’ ಪುನೀತ್ ಬಗ್ಗೆ ಯುವ ಮಾತು..!
ಯುವ ನಟನೆಯ ಮೊದಲ ಸಿನಿಮಾ.. ಯುವ ಜೊತೆ ಸಪ್ತಮಿ ಸಿನಿಹೆಜ್ಜೆ..!

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ಗೆ ನಟ ಯುವರಾಜ್‌ ಕುಮಾರ್‌(Yuva Rajkumar)ಎಂಟ್ರಿ ಕೊಟ್ಟಿದ್ದು, 'ಯುವ' ದರ್ಬಾರ್‌ಗೆ (Yuava Movie) ಕೌಂಟ್‌ಡೌನ್‌ ಸಹ ಶುರುವಾಗಿದೆ. ಇನ್ನೂ ಈ ಚೊಚ್ಚಲ ಸಿನಿಮಾ ಬಗ್ಗೆ ನಟ ಯುವರಾಜ್‌ ಕುಮಾರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಈ ಸಿನಿಮಾ ಮಾರ್ಚ್‌ 29ರಂದು ರಿಲೀಸ್ ಆಗಲಿದೆ. ಜನರು ನಮ್ಮ ಹಣೆಬರಹ ನಿರ್ಧರಿಸುತ್ತಾರೆಯೇ ಹೊರತು, ಕುಟುಂಬ ಮತ್ತು ಬ್ಯಾಕ್‌ಗ್ರೌಂಡ್‌ ಅಲ್ಲ ಎಂದು ಯುವರಾಜ್‌ ಕುಮಾರ್‌ ಹೇಳಿದ್ದಾರೆ. ಟೈಟಲ್‌ನಿಂದ ನಾವು ಸಿನಿಮಾವನ್ನು ಅಳೆಯಲು ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ಕಾಲೇಜ್ ಲೈಫ್‌ ಬಗ್ಗೆ ಹೇಳಲಾಗಿದೆ. ಸಿನಿಮಾ ರಿಲೀಸ್‌ ಡೇಟ್‌ ಹತ್ರ ಬರುತ್ತಿದೆ ಎಂದು ನಾನು ಯಾವುದೇ ಟೆನ್ಷನ್‌ ಮಾಡಿಕೊಂಡಿಲ್ಲ ಎಂದು ಯುವರಾಜ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ..ಇದರಿಂದ ದೊರೆಯುವ ಫಲವೇನು ?

Related Video