Asianet Suvarna News Asianet Suvarna News
breaking news image

ಶಿವಣ್ಣಾ, ಪ್ರಭುದೇವಾ, ಯೋಗರಾಜ್ ಭಟ್ ಬಿಗ್ ಪ್ಯಾನ್ ಇಂಡಿಯಾ‌ ಸಿನಿಮಾ!

ಸ್ಯಾಂಡ್‌ವುಡ್‌ನಲ್ಲಿ  ಇನ್ಮುಂದೆ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳದ್ದೆ ಹವಾ. ಅಷ್ಟೆ ಅಲ್ಲದೆ ಮಲ್ಟಿ ಸ್ಟಾರರ್ ಸಿನಿಮಾಗಳು ಕೂಡ ಹಲ್ ಚಲ್ ನಡೆಸಲಿವೆ. ಒಂದು ಕಡೆ ಉಪ್ಪಿ ಸುದೀಪ್ (Sudeep) ಮಲ್ಟಿ ಸ್ಟಾರರ್ ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡುತ್ತಿದೆ. ಇದೇ ಲಿಸ್ಟ್ ಗೆ  ಹೊಸ ಸೇರ್ಪಡೆ ಶಿವಣ್ಣಾ ಪ್ರಭುದೇವಾ ಯೋಗರಾಜ್ ಭಟ್ BIG ಪ್ಯಾನ್ ಇಂಡಿಯಾ ಸಿನಿಮಾ.

ಸ್ಯಾಂಡ್‌ವುಡ್‌ನಲ್ಲಿ  ಇನ್ಮುಂದೆ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳದ್ದೆ ಹವಾ. ಅಷ್ಟೆ ಅಲ್ಲದೆ ಮಲ್ಟಿ ಸ್ಟಾರರ್ ಸಿನಿಮಾಗಳು ಕೂಡ ಹಲ್ ಚಲ್ ನಡೆಸಲಿವೆ. ಒಂದು ಕಡೆ ಉಪ್ಪಿ ಸುದೀಪ್ (Sudeep) ಮಲ್ಟಿ ಸ್ಟಾರರ್ ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡುತ್ತಿದೆ. ಇದೇ ಲಿಸ್ಟ್ ಗೆ  ಹೊಸ ಸೇರ್ಪಡೆ ಶಿವಣ್ಣಾ ಪ್ರಭುದೇವಾ ಯೋಗರಾಜ್ ಭಟ್ BIG ಪ್ಯಾನ್ ಇಂಡಿಯಾ ಸಿನಿಮಾ. ಕೇಳೋಕೆ ಸಖತ್ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ ಇನ್ನು ಸಿನಿಮಾ ಹೇಗಿರಬಹುದು.

ಕೆಜಿಎಫ್ 2 ರಿಲೀಸ್ ನಂತರ ರಾಕಿಂಗ್ ಸ್ಟಾರ್ ಯಶ್ ಎಲ್ಲಿದ್ದಾರೆ.?

ಇಷ್ಟು ದಿನ ಈ ಸಿನಿಮಾ ಸುದ್ದಿ ಹರಿದಾಡುತ್ತಿತ್ತು. ಆದರೆ ನಿರ್ಮಾಣ ಯಾರದ್ದು ಅನ್ನೋ ಚರ್ಚೆ ಹಾಗೆ ಉಳಿದಿತ್ತು. ಇದೀಗ  'ಲಿಂಗಾ', 'ಬಜರಂಗಿ ಭಾಯಿಜಾನ್', 'ಸೂಪರ್', 'ಪವರ್' ಥರದ ಅನೇಕ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‌ಲೈನ್ ವೆಂಕಟೇಶ್‌ ಈ ಸಿನಿಮಾ ನಿರ್ಮಿಸುತ್ತಿರುವುದು ಖಚಿತವಾಗಿದೆ.

ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ . ಕುಲದಲ್ಲಿ ಕೀಳ್ಯಾವುದು ಅನ್ನೋ ಟೈಟಲ್ ಫಿಕ್ಸ್ ಆಗೊ ಸಾಧ್ಯತೆ ಇದೆ. ಸದ್ಯ ಯೋಗರಾಜ್ ಭಟ್ ಅವರು 'ಗಾಳಿಪಟ 2' ಸಿನಿಮಾದ ಬಿಡುಗಡೆ ತಯಾರಿಯಲ್ಲಿ ಇದ್ದಾರೆ. ಈ ಹಿಂದೆ ರಾಕ್ಲೈನ್ ಜೊತೆ ಮನಸಾರೆ ಸಿನಿಮಾ ಮಾಡಿದ್ದರು ಭಟ್ಟರು ಈಗ ಈ ಬಿಗ್ ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕುತ್ತಿದ್ದಾರೆ. ನನ್ನ ವೃತ್ತಿಜೀವನದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಇದು ಕೂಡ ಒಂದಾಗಲಿದೆ' ಎಂದು ಯೋಗರಾಜ್ ಭಟ್ ಹೇಳಿಕೊಂಡಿದ್ದಾರೆ. ಈ ಇಬ್ಬರು ನಟರನ್ನು ಹಿಂದೆಂದೂ ಕಾಣಿಸಿದ ರೀತಿಯಲ್ಲಿ ತೋರಿಸಲು ಯೋಗರಾಜ್ ಭಟ್ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. 1960-70 ದಶಕದಲ್ಲಿ ಸಿನಿಮಾದ ಕಥೆ ಸಾಗಲಿದೆಯಂತೆ. 

ಈ ಸಿನಿಮಾ ಅದ್ದೂರಿಯಾಗಿ  ನಿರ್ಮಾಣವಾಗಲಿದ್ದು  ಬುಹುಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಅಂದಹಾಗೆ ರಾಕ್ಲೈನ್ ಸದ್ಯ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.  ಇದಾದ ನಂತರ ಯಶ್ ಜೊತೆಗೂ ಸಿನಿಮಾ ಮಾಡ್ತಾರಂತೆ. ಈ ನಡುವೆ ಶಿವಣ್ಣ ಪ್ರಭುದೇವ ಬಿಗ್ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸುವ ಪ್ಲ್ಯಾನ್ ಆಗಿದೆ.

Video Top Stories