Asianet Suvarna News Asianet Suvarna News

ಲೀಕಾಯ್ತಾ ಯಶ್ ಸಿನಿಮಾ ಫೋಟೋ ? ಗೋವಾದಲ್ಲಿ ಯಶ್ ಟಾಕ್ಸಿಕ್‌ ಸೀಕ್ರೆಟ್ ಶೂಟಿಂಗ್!

ನಟ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಶೂಟಿಂಗ್‌ನನ್ನು ಗೋವಾದಲ್ಲಿ ಮಾಡುತ್ತಿದ್ದಾರಂತೆ. ಇದೀಗ ಶೂಟಿಂಗ್‌ನ ಫೋಟೋವೊಂದು ಸಖತ್ ವೈರಲ್‌ ಆಗುತ್ತಿದೆ.

ನಟ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿ(Shooting) ಬ್ಯೂಜಿಯಾಗಿದ್ದಾರೆ. ಗೋವಾದಲ್ಲಿ(Goa) ಈ ಸಿನಿಮಾದ ಶೂಟಿಂಗ್‌ನನ್ನು ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಹೀಗಿದ್ದರೂ ಯಶ್‌(Yas) ನಿರ್ದೇಶಕಿ ಗೀತು ಮೋಹನ್​ದಾಸ್(Geetu Mohandas) ಜೊತೆ ಇರುವ ಫೋಟೋವೊಂದು ವೈರಲ್‌ ಆಗಿದೆ. ಅಂದಹಾಗೆ ಇದು ಶೂಟಿಂಗ್​ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಯಾನ್ಸ್ ಇದು ಸೆಟ್​ನ ಫೋಟೋ ಎಂದೇ ಹೇಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾ (Toxic Movie) ಶೂಟಿಂಗ್‌​ನಲ್ಲಿ ಬ್ಯುಸಿ ಆಗಿದ್ದಾರೆ. 2025ರ ಏಪ್ರಿಲ್‌​ಗೆ ಸಿನಿಮಾನ ರಿಲೀಸ್ ಮಾಡೋ ಟಾರ್ಗೆಟ್‌​ನ ಇಟ್ಟುಕೊಂಡು ಸಿನಿಮಾ ಶೂಟ್ ಮಾಡಲಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಮತ್ತೆ ಬಣ್ಣ ಹಚ್ಚಲು ಬಂದ ಝಮೀರ್ ಪುತ್ರ..! ಝೈದ್ ಖಾನ್ ಎರಡನೇ ಸಿನಿಮಾ ಅನೌನ್ಸ್..!

Video Top Stories