KGF 2 ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುತ್ತಿರೋರಿಗೆ ಇಲ್ಲಿದೆ ಸಖತ್ ನ್ಯೂಸ್!

ರಾಕಿಭಾಯ್ ಎಂಟ್ರಿಗೆ ಕೆಲವೇ ದಿನಗಳು ಬಾಕಿಯಿದ್ದು, ಪ್ರತಿದಿನವೂ ಚಿತ್ರದ ಹೊಸ ಹೊಸ ಅಪ್‌ಡೇಟ್‌ಗಳನ್ನು ಹೇಳಲಾಗುತ್ತಿದೆ. ಬ್ರಿಟನ್‌ನಲ್ಲಿ ಯಾರು ಊಹಿಸದ ಮಟ್ಟದಲ್ಲಿ ಟಿಕೆಟ್‌ಗಳು ಈಗಾಗಲೇ ಬುಕ್ಕಿಂಗ್ ಆಗಿದೆ.

Share this Video
  • FB
  • Linkdin
  • Whatsapp

ರಾಕಿಭಾಯ್ (Yash) ಎಂಟ್ರಿಗೆ ಕೆಲವೇ ದಿನಗಳು ಬಾಕಿಯಿದ್ದು, ಪ್ರತಿದಿನವೂ ಚಿತ್ರದ ಹೊಸ ಹೊಸ ಅಪ್‌ಡೇಟ್‌ಗಳನ್ನು ಹೇಳಲಾಗುತ್ತಿದೆ. ಬ್ರಿಟನ್‌ನಲ್ಲಿ ಯಾರು ಊಹಿಸದ ಮಟ್ಟದಲ್ಲಿ ಟಿಕೆಟ್‌ಗಳು (Tickets) ಈಗಾಗಲೇ ಬುಕ್ಕಿಂಗ್ ಆಗಿದೆ. ಇದೀಗ ಭಾರತದ ಹಲವು ಭಾಗಗಳಲ್ಲಿ ಟಿಕೆಟ್ ಬುಕ್ಕಿಂಗ್ ಕುರಿತು ಹೊಂಬಾಳೆ ಬ್ಯಾನರ್ (Hombale Banner) ಟ್ವಿಟರ್ (Tweeter) ಮೂಲಕ ತಿಳಿಸಿದೆ. ಕೇರಳ, ತಮಿಳುನಾಡು, ಹಾಗೂ ಉತ್ತರಭಾರತದಲ್ಲಿ ಏಪ್ರಿಲ್ 7ರಿಂದ ಬುಕ್ಕಿಂಗ್ ಆರಂಭದ ಕುರಿತು ಘೋಷಿಸಲಾಗಿದೆ. ಇನ್ನು ಕರ್ನಾಟಕದಲ್ಲಿ (Karnataka) ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ.

KGF Chapter 2: ಬಾಲಿವುಡ್ ಬಿಗ್ ಸ್ಟಾರ್‌ಗಳ ಕೋಟೆಯಲ್ಲಿ ಯಶ್ ಮಿಂಚಿಂಗ್.!

ನ್ಯಾಷನಲ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ರಾಕಿಭಾಯ್ ಫೀವರ್ ಜೋರಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲೂ ರಿಲೀಸ್ ಆಗುತ್ತಿರುವ 'ಕೆಜಿಎಫ್ 2' ರಿಲೀಸ್‌ಗೂ ಮುಂಚೆನೇ ಒಂದಲ್ಲಾ ಒಂದು ವಿಚಾರವಾಗಿ ಚಿತ್ರ ದಾಖಲೆ ಬರೆಯುತ್ತಿದೆ. 'ಕೆಜಿಎಫ್ 2' ಅಮೆರಿಕಾ, ರಷ್ಯಾ, ಯುರೋಪ್, ವಿಶ್ವದೆಲ್ಲಡೆ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಇತ್ತೀಚಿಗೆ ಬ್ರಿಟನ್‌ನಲ್ಲಿ 12 ಗಂಟೆಗಳಲ್ಲಿ 5000 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿ ರೆಕಾರ್ಡ್ ಮಾಡಿತ್ತು. ಈಗ ಗ್ರೀಸ್‌ನಲ್ಲಿ ರಿಲೀಸ್ ಆಗಲಿರುವ ದಕ್ಷಿಣ ಭಾರತದ ಮೊದಲ ಚಿತ್ರವಾಗಿ ದಾಖಲೆ ಮಾಡಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video