Rocking Star Yash: ರಾಧಿಕಾಗೆ ರಸ್ತೆ ಬದಿ ಅಂಗಡಿಯಲ್ಲಿ ಐಸ್ ಕ್ಯಾಂಡಿ ಕೊಡಿಸಿದ ಯಶ್ !

ಕನ್ನಡ ಚಿತ್ರರಂಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಫ್ಯಾಮಿಲಿ ಜೊತೆ ಭಟ್ಕಳದ ಶಿರಾಲಿಯ ಚಿತ್ರಾಪುರ ಮಠದ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಕಾಣಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

‘ರಾಕಿಂಗ್ ಸ್ಟಾರ್’ ಯಶ್ ಈಗ ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಯಶ್(Yash) ಪಾನಿಪುರಿಕಿಟ್ಟಿ ಹೊಸ ಜಿಮ್ ಒಂದರ ಓಪನಿಂಗ್ ಮಾಡಿದ್ದರು. ಯಶ್ ಎಷ್ಟೆ ಬಿಜಿ ಇದ್ದರೂ ಯಶ್ ಫ್ಯಾಮಿಲಿಗೆ ಟೈಮ್ ಕೊಡ್ತಾರೆ ಅನ್ನೋದಕ್ಕೆ ಸಾಕ್ಷಿ ಈ ಫೋಟೊಸ್. ಪ್ರೀತಿಯ ಮಡದಿ ರಾಧಿಕಾ(Radhika Pandit) ಪುಟ್ಟ ಆಸೆ ಈಡೇರಿಸಿದ್ದಾರೆ ಯಶ್. ರಾಧಿಕಾಗೆ ರಸ್ತೆ ಬದಿಯ ಅಂಗಡಿಯಲ್ಲಿ(Shop) ಐಸ್ ಕ್ಯಾಂಡಿ(Ice Cream) ಖರೀದಿಸಿದ್ದಾರೆ. ಮಗಳು ಐರಾ ಮತ್ತು ಮಗ ಯಥರ್ವ್ ಗಾಗಿ ಚಾಕೊಲೇಟ್(Chocolate) ಖರೀಧಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೊಗಳು ವೈರಲ್ ಆಗುತ್ತಿದ್ದು ರಾಕಿಭಾಯ್ ಎಷ್ಟು ಸಿಂಪಲ್ ಅಲ್ವಾ ಎನ್ನುತ್ತಿದ್ಧಾರೆ ಅವರ ಫ್ಯಾನ್ಸ್. ಎಷ್ಟೇ ಗ್ಲೋಬಲ್ ಸ್ಟಾರ್ ಆದ್ರೂ ಯಶ್ ತಾವು ನಡೆದು ಬಂದ ಹಾದಿಯನ್ನ ಮರೆತಿಲ್ಲ. ಜೀವನದಲ್ಲಿ ಕೆಲವೊಂದು ಸಣ್ಣ ಸಣ್ಣ ವಿಚಾರಗಳು ಕೂಡ ಅತಿ ದೊಡ್ಡ ಖುಷಿ ಕೊಡುತ್ತೆ ಅಂತಾರೆ ಯಶ್ ಮತ್ತು ರಾಧಿಕಾ. 

ಇದನ್ನೂ ವೀಕ್ಷಿಸಿ: ಅಹಿಂದಗೆ ಶಕ್ತಿ ತುಂಬಿದ ಬಜೆಟ್‌ ರಾಮಯ್ಯ ! ಲೆಕ್ಕರಾಮಯ್ಯನ ದಾಖಲೆಯ ಬ್ಯಾಲೆನ್ಸ್ ಬಜೆಟ್‌ನಲ್ಲಿ ಏನೇನಿದೆ..?

Related Video