ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 2 ಸ್ಥಾನಕ್ಕೇರಿದ ಕೆಜಿಎಫ್-2, ಇತಿಹಾಸ ಸೃಷ್ಟಿಸಿದ ರಾಕಿಂಗ್ ಭಾಯ್.!

ವೈಲೆನ್ಸ್ (Violence) ವೈಲೆನ್ಸ್ ವೈಲೆನ್ಸ್ ಐ ಡೋಂಟ್ ಲೈಕ್ ಇಟ್ ವೈಲೆನ್ಸ್ ಅಂತ ಕೆಜಿಎಫ್ ಕಿಂಗ್ ರಾಕಿ ಡೈಲಾಗ್ ಹೊಡಿತಾರೆ. ಆದ್ರೆ ಅದೇ ಕೆಜಿಎಫ್-2 (KGF2) ಸಿನಿಮಾ ರೆಕಾರ್ಡ್‌ನಲ್ಲಿ ವೈಲೆನ್ಸ್ ಮಾಡುತ್ತಿದೆ. 

First Published Apr 20, 2022, 2:58 PM IST | Last Updated Apr 20, 2022, 5:59 PM IST

ವೈಲೆನ್ಸ್ (Violence) ವೈಲೆನ್ಸ್ ವೈಲೆನ್ಸ್ ಐ ಡೋಂಟ್ ಲೈಕ್ ಇಟ್ ವೈಲೆನ್ಸ್ ಅಂತ ಕೆಜಿಎಫ್ ಕಿಂಗ್ ರಾಕಿ ಡೈಲಾಗ್ ಹೊಡಿತಾರೆ. ಆದ್ರೆ ಅದೇ ಕೆಜಿಎಫ್-2 (KGF2) ಸಿನಿಮಾ ರೆಕಾರ್ಡ್‌ನಲ್ಲಿ ವೈಲೆನ್ಸ್ ಮಾಡುತ್ತಿದೆ. ಕೆಜಿಎಫ್-2 ರೆಕಾರ್ಡ್ ನೋಡ್ತಿದ್ರೆ ಕನ್ನಡ ಸಿನಿ ಪ್ರೇಕ್ಷಕರಿಗೆ ಹೆಮ್ಮೆ ಆಗುತ್ತೆ. ಯಾಕಂದ್ರೆ ನಮ್ಮ ಕನ್ನಡ ಸಿನಿಮಾ ಗ್ಲೋಬಲ್ ಸಿನಿ ಮಾರ್ಕೆಟ್‌ನಲ್ಲಿ ಸೌಂಡ್ ಮಾಡ್ತಿದೆ. 

RCB ತಂಡದಲ್ಲಿ ಕೆಜಿಎಫ್-2 ಕ್ರೇಜ್, ಗನ್ ಹಿಡಿದು ಪೋಸ್ ಕೊಟ್ಟ ಹರ್ಷಲ್-ಡುಪ್ಲೆಸಿಸ್.!

ಕೆಜಿಎಫ್-2 (KGF 2) ಸಿನಿಮಾ ವರ್ಲ್ಡ್ ಸಿನಿ ಮಾರ್ಕೆಟ್‌ನಲ್ಲಿ ಗುರುತಿಸಿಕೊಂಡಿದೆ. ಕೆಜಿಎಫ್-2 ಸಿನಿಮಾದ ಕಲೆಕ್ಷನ್‌ಗೆ ಕಡಿವಾಣ ಹಾಕೋಕೆ ಯಾರಿಂದಲೂ ಸಾಧ್ಯ ಆಗ್ತಿಲ್ಲ. ಕಳೆದ ಗುರುವಾರ ಬಿಡುಗಡೆ ಆಗಿದ್ದ ಕೆಜಿಎಫ್-2 ನಾಲ್ಕೇ ದಿನದಲ್ಲಿ 551 ಕೋಟಿ ಗಳಿಕೆ ಕಂಡಿತ್ತು. ಈ ವೀಕ್ಎಂಡ್‌ಗೆ ಕೆಜಿಎಫ್-2 ಕಲೆಕ್ಷನ್ ಡ್ರಾಪ್ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅವರ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಕೆಜಿಎಫ್-2 ಐದನೇ ದಿನ ಸೋಮವಾರ ಕೂಡ ದೊಡ್ಡ ಗಳಿಕೆ ಕಂಡಿದೆ. ಸೋಮವಾರ ಒಂದೇ ದಿನ 108.50 ಕೋಟಿ ಗಳಿಕೆ ಮಾಡಿದೆ. ಹೀಗಾಗಿ ಕೆಜಿಎಫ್ ಚಾಪ್ಟರ್-2 ಐದು ದಿನದ ಒಟ್ಟು ಕಲೆಕ್ಷನ್ 658.50 ಕೋಟಿ ಆಗಿದೆ. 

 ಕರ್ನಾಟಕದಲ್ಲಿ ಕೆಜಿಎಫ್-2 ಕಲೆಕ್ಷನ್ ಇತಿಹಾಸ ಆಗಿದೆ. ಕನ್ನಡದಲ್ಲಿ ಐದೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಕೆಜಿಎಫ್-2 ಆಗಿದೆ. ಈ ಸಿನಿಮಾ ಕನ್ನಡದಲ್ಲಿ ಮೊದಲ ದಿನ 35 ಕೋಟಿ ಕಲೆಕ್ಷನ್ ಮಾಡಿದ್ರೆ ಎರಡನೇ ದಿನ 25 ಕೋಟಿ ಮೂರನೇ ದಿನ 20 ಕೋಟಿ ನಾಲ್ಕನೇ ದಿನ 22 ಕೋಟಿ ಹಾಗು ಐದನೇ ದಿನ 19 ಕೋಟಿ ಗಳಿಕೆ ಕಂಡಿದೆ. 

ಯಶ್ ಅಬ್ಬರ ಯಾವ್ ಮಟ್ಟಕ್ಕಿದೆ ಅಂದ್ರೆ ವಿಶ್ವದಲ್ಲೇ ಕೆಜಿಎಫ್2 (KGF 2) ಸಿನಿಮಾ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್ 14ರಿಂದ 17 ವರೆಗೂ ವಿಶ್ವದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯನ್ನ ಕಾಮ್ ಸ್ಕೋರ್ ಅನ್ನೋ ಸಂಸ್ಥೆ ಬಿಡುಗಡೆ ಮಾಡಿದ್ದು, ಕೆಜಿಎಫ್-2 ಸಿನಿಮಾ ಎರಡನೇ ಸ್ಥಾನಕ್ಕೇರಿದೆ. ಗ್ಲೋಬಲ್ ಸಿನಿ ಮಾರ್ಕೆಟ್‌ನಲ್ಲಿ ಯುಕೆಯ ಫೆಂಟಾಸ್ಟಿಕ್ ಬೀಸ್ಟ್ ಅನ್ನೋ ಸಿನಿಮಾ ಬಾಕ್ಸಾಫೀಸ್ ರೂಲ್ ಮಾಡುತ್ತಿದ್ದು, ಎರಡನೇ ಸ್ಥಾನದಲ್ಲಿ ಕೆಜಿಎಫ್-2 ಇದೆ. ಈ ಮೂಲಕ ಯಶ್ ಗ್ಲೋಬಲ್ ಸ್ಟಾರ್ ಕೂಡ ಆಗಿದ್ದಾರೆ. 
 

Video Top Stories