Abhishek Ambareesh Wedding: ಅಂಬಿ ಫೋಟೊಗೆ ನಮನ ಸಲ್ಲಿಸಿ ಅಭಿಷೇಕ್‌-ಅವಿವಾಗೆ ಶುಭಹಾರೈಸಿದ ಯಶ್-ರಾಧಿಕಾ

ಅಭಿಷೇಕ್ ಮತ್ತು ಅವಿವಾ ಮದುವೆ ಸಂಭ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಆಗಮಿಸಿ ಶುಭಹಾರೈಸಿದ್ದಾರೆ. 

Share this Video
  • FB
  • Linkdin
  • Whatsapp

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಇಂದು (ಜೂನ್ 5) ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿಡಪ ಜೊತೆ ಅಭಿಷೇಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಪತಿ-ಪತ್ನಿಯರಾದರು. ಅಭಿಷೇಕ್ ಮದುವೆ ಗೌಡರ ಸಾಂಪ್ರದಾಯದ ಪ್ರಕಾರ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾಗೆ ಮಾಂಗಲ್ಯಧಾರಾಣೆ ಮಾಡಿದರು. ಅಭಿ ಮದುವೆಗೆ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಭಾಗಿಯಾಗಿ ಅಭಿಷೇಕ್-ಅವಿವಾಗೆ ಶುಭಹಾರೈಸಿದರು. ಮದುವೆಗೆ ಎಂಟ್ರಿ ಕೊಡುತ್ತಿದ್ದಂತೆ ಯಶ್, ಅಂಬರೀಶ್ ಫೋಟೊಗೆ ನಮನ ಸಲ್ಲಿಸಿ ಕಲ್ಯಾಣ ಮಂಟಪಕ್ಕೆ ತೆರಳಿದರು. 

Related Video