
Sandalwood: 2022ರಲ್ಲಿ ಐತಿಹಾಸಿಕ ಸಾಧನೆ ಮಾಡಿದ ಯಶ್-ಕಿಚ್ಚ: ಗೂಗಲ್'ನಲ್ಲಿ ಹಿಸ್ಟರಿ ಸೃಷ್ಟಿ
2022ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆಯಾಗಿದೆ.
ಪ್ರತಿ ವರ್ಷ ಒಂದೊಂದು ಸಾಧನೆ ಮಾಡುತ್ತಾ ಬಂದಿರೋ ಯಶ್-ಕಿಚ್ಚನ ಹೆಸರಿಗೆ ಈಗ ಆಲ್ ಟೈಮ್ ನೆನಪಿನಲ್ಲಿಟ್ಟುಕೊಳ್ಳೊ ಕೀರ್ತಿಯೊಂದು ಸಿಕ್ಕಿದೆ. ಅದೇ ಈ ವರ್ಷ ವಿಶ್ವದಾದ್ಯಂತ ಅತಿ ಹೆಚ್ಚು ಹುಡುಕಲ್ಪಟ್ಟ ಕನ್ನಡದ ನಟರ ಪಟ್ಟಿಯಲ್ಲಿ ಯಶ್ ಹಾಗು ಕಿಚ್ಚ ಸುದೀಪ್ ಹೆಸರು ದಾಖಲಾಗಿದೆ. ಇಬ್ಬರ ಅಭಿಮಾನಿಗಳು ಸಂಭ್ರಮಿಸೋ ಈ ಪಟ್ಟಿಯನ್ನು ಗೂಗಲ್ ರಿವೀಲ್ ಮಾಡಿದೆ. 2022ರ ಗೂಗಲ್'ನಲ್ಲಿ ಕನ್ನಡ ನಟರ ಹುಡುಕಾಟದ ಹಿಸ್ಟರಿ ತೆಗೆದು ನೋಡಿದರೆ ಭಾರತದಲ್ಲಿ ಹಾಗೆಯೇ ವಿಶ್ವಾದ್ಯಂತ ಹೆಚ್ಚು ಸರ್ಚ್ ಆಗಿರುವುದು ಕೆಜಿಎಫ್ ಸ್ಟಾರ್ ಯಶ್ ಮೊದಲ ಸ್ಥಾನ ಪಡೆದಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಿಂದ ಸ್ಯಾಂಡಲ್ ವುಡ್ ಮಾಣಿಕ್ಯ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡದ ಇಬ್ಬರು ಸೂಪರ್ ಸ್ಟಾರ್ಸ್ ವಿಶ್ವದಾದ್ಯಂತ ಸದ್ದು ಮಾಡಿದ್ದಾರೆ ಅನ್ನೋ ಮಾತಿಗೆ ಗೂಗಲ್ ಈಗ ಉತ್ತರ ಕೊಟ್ಟಿದೆ.