News 360°: ಮತ್ತೊಂದು ಚುನಾವಣಾ ಸಮೀಕ್ಷೆ ಬಹಿರಂಗ: 2024ರಲ್ಲಿ ಗೆದ್ದು ದೇಶದ ಗದ್ದುಗೆ ಏರೋದ್ಯಾರು?

2024ಕ್ಕೆ ಮೋದಿ ಮತ್ತೆ ಪ್ರಧಾನಿಯಾಗೋದು ನಿಶ್ಚಿತವಾ..? ಹೌದು ಅನ್ನುತ್ತಿವೆ ಇತ್ತೀಚಿನ ಸಮೀಕ್ಷೆಗಳು.. ನರೇಂದ್ರ ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸುವುದೇ ಅಜೆಂಡಾ ಮಾಡಿಕೊಂಡ ಇಂಡಿಯಾ ಮೈತ್ರಿಕೂಟ ತನ್ನ ಗುರಿ ಸಾಧಿಸಲ್ವಾ..? 2014.. 2019ರ ರೆಕಾರ್ಡ್ ಅನ್ನ ಮೋದಿ ಮತ್ತೆ ಮುಂದುವರಿಸ್ತಾರಾ..?
 

Share this Video
  • FB
  • Linkdin
  • Whatsapp

2024ರ ಚುನಾವಣೆಗೆ ಇನ್ನೂ ಉಳಿದಿರೋದು ಕೇವಲ 8 ತಿಂಗಳು... ಆಗಲೇ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ಶುರು ಮಾಡಿಕೊಳ್ತಿದ್ದು.. ಗೆಲುವಿಗಾಗಿ ರಣತಂತ್ರ ಹೆಣೆಯೋದ್ರಲ್ಲಿ ಫುಲ್ ಬ್ಯೂಸಿಯಾಗಿವೆ. ಈ ಮಧ್ಯೆ ವಿವಿಧ ಸಮೀಕ್ಷೆಗಳು ಬಹಿರಂಗವಾಗ್ತಿದ್ದು.. 2024ರಲ್ಲಿ ಯಾರಿಗೆ ಅಧಿಕಾರ ಸಿಗಲಿದೆ ಎಂದು ಭವಿಷ್ಯ ಹೇಳ್ತಿವೆ. ಇಂಡಿಯಾ ಟುಡೇ (India ToDay)- ಸಿ ವೋಟರ್ 2024ರ ಲೋಕಸಭಾ ಚುನಾವಣೆ(LOksabha election) ಕುರಿತಂತೆ ದೇಶಾದ್ಯಂತ ಸರ್ವೇ ಮಾಡಿದ್ದು, ಮತದಾರರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.. ಸಮೀಕ್ಷೆ ಪ್ರಕಾರ ಮೂರನೇ ಬಾರಿಯೂ ಪ್ರಧಾನಿ ಮೋದಿಯೇ(PM MOdi) ಮತ್ತೆ ಗೆದ್ದು ಅಧಿಕಾರ ವಹಿಸಿಕೊಳ್ಳೊದು ಪಕ್ಕಾ ಎಂದು ಭವಿಷ್ಯ ನುಡಿದಿದ್ದಾರೆ. ಅತ್ತ 26 ವಿಪಕ್ಷಗಳ ಇಂಡಿಯಾ ಕೂಟ ತನ್ನ ಸ್ಥಾನ ಹೆಚ್ಚಿಸಿಕೊಂಡ್ರು.. ಅಧಿಕಾರ ಹಿಡಿಯೋದು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: Today Horoscope: ಇಂದು ಸೋಮಪ್ರದೋಷವಿದ್ದು, ಈ ರೀತಿಯ ಪೂಜೆಯಿಂದ ಸಾಕಷ್ಟು ದೋಷಗಳು ಪರಿಹಾರ

Related Video