
200ಕ್ಕೂ ಅಧಿಕ ಸಿನಿಮಾ ಮಾಡಿ ಹೆಸರು ಮಾಡಿರೋ ನಟ ದೇವರಾಜ್ ಯಾಕೆ ರಾಜಕೀಯಕ್ಕೆ ಎಂಟ್ರಿ ಕೊಡಲಿಲ್ಲ?
ಶಂಕರ್ ನಾಗ್, ಬಿ ಜಯಶ್ರೀ ನೇತೃತ್ವದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿರೋ ನಟ ದೇವರಾಜ್ ಅವರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟು ಹೆಸರು ಮಾಡಿರುವ ದೇವರಾಜ್ ಯಾಕೆ ರಾಜಕೀಯಕ್ಕ ಬಂದಿಲ್ಲ?
ನಟ ದೇವರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ನಟ, ವಿಲನ್ ಆಗಿಯೂ ಅಬ್ಬರಿಸಿದ್ದಾರೆ. 1980ರಿಂದ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಅವರು ಇಂದು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಅವರು ಯಾಕೆ ರಾಜಕೀಯಕ್ಕೆ ಬಂದಿಲ್ಲ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ದೇವರಾಜ್ ಅವರೇ ಉತ್ತರ ನೀಡಿದ್ದಾರೆ.