
ಗ್ಲೋಬಲ್ ಹಿಟ್ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್ ಯಾಕೆ ಚೇಂಜ್ ಆಗ್ಲಿಲ್ಲ?
KGF ನಂತಹ ಗ್ಲೋಬಲ್ ಹಿಟ್ ಸಿನಿಮಾದಲ್ಲಿ ನಟಿಸಿದ್ರೂ ಅದರ ನಾಯಕಿ ಶ್ರೀನಿಧಿ ಶೆಟ್ಟಿ ಲೈಫ್ ಮಾತ್ರ ಬದಲಾಗಲಿಲ್ಲ. ದೊಡ್ಡ ಆಫರ್ಗಳ ಅವಕಾಶ ಸಿಗಲಿಲ್ಲ. ಸಿಕ್ಕ ಸಿನಿಮಾಗಳು ಗೆಲ್ಲಲಿಲ್ಲ. ಇದೀಗ ಹಿಟ್-3 ಸಿನಿಮಾ ಮೂಲಕ ಶ್ರೀನಿಧಿ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ಹಿಟ್-3 ರಿಲೀಸ್ ಹೊಸ್ತಿಲಲ್ಲಿ ಹೊಸ ಜೋಶ್ನಲ್ಲಿ ಶ್ರೀನಿಧಿ ಹೇಳಿದ್ದೇನು ನೋಡೋಣ ಬನ್ನಿ.
ಒಂದು ದೊಡ್ಡ ಗ್ಯಾಪ್ ಬಳಿಕ ಶ್ರೀನಿಧಿ ಶೆಟ್ಟಿ ಪ್ರತ್ಯಕ್ಷವಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಹಿಟ್-3 ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ನಟಿಸಿದ್ದು, ಇದೇ ವಾರ ಪ್ಯಾನ್ ಇಂಡಿಯಾ ಈ ಸಿನಿಮಾ ತೆರೆಗೆ ಬರ್ತಾ ಇದೆ. ಸದ್ಯ ನಾನಿ ಜೊತೆ ಶ್ರೀನಿಧಿ ದೇಶದ ಪ್ರಮುಖ ನಗರಗಳನ್ನ ಸುತ್ತುತ್ತಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಅಸಲಿಗೆ ಕೆಜಿಎಫ್ 1 & 2 ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡಾಗ ಎಲ್ಲರೂ ಶ್ರೀನಿಧಿ ಅದೃಷ್ಟವನ್ನ ಕೊಂಡಾಡಿದ್ರು. ಈಕೆಯನ್ನ ಗೋಲ್ಡನ್ ಗರ್ಲ್ ಅಂತ ಕರೆದಿದ್ರು. ಆದ್ರೆ ಕೆಜಿಎಫ್ ನಂತರ ಶ್ರೀನಿಧಿ ಲೈಫ್ನಲ್ಲಿ ಹೆಚ್ಚೆನೂ ಬದಲಾಗಲಿಲ್ಲ. ಚಿಯಾನ್ ವಿಕ್ರಂ ಜೊತೆ ನಟಿಸಿದ ಬಹುನಿರೀಕ್ಷೆಯ ಕೋಬ್ರಾ ಸಿನಿಮಾ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿತು. ಅಲ್ಲಿಂದ ಕಾಣೆಯಾದ ಶ್ರೀನಿಧಿ 3 ವರ್ಷ ಕಾಣೆಯಾಗಿದ್ರು. ಹಾಗಾದ್ರೆ ಶ್ರೀನಿಧಿಗೆ ಅದೃಷ್ಟ ಕೈಕೊಟ್ತಾ,,? ಕರಾವಳಿ ಬ್ಯೂಟಿಗೆ ಸಕ್ಸಸ್ನ ಹ್ಯಾಂಡಲ್ ಮಾಡಲಿಕ್ಕೆ ಬರಲಿಲ್ವಾ ಅನ್ನೋ ಪ್ರಶ್ನೆಗಳಿಗೆ ಶ್ರೀನಿಧಿ ಉತ್ತರಿಸಿದ್ದು ಹೀಗೆ..