Rashmika Mandanna: ಯೂಟ್ಯೂಬ್​ ಚಾನೆಲ್ ಶುರು ಮಾಡಿದ ನ್ಯಾಷನಲ್ ಕ್ರಶ್ ರಶ್ಮಿಕಾ

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ನಟಿಯರಲ್ಲಿ ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿರುವ ಚಮಕ್ ಬೆಡಗಿ ರಶ್ಮಿಕಾ ಮಂದಣ್ಣ ಕೂಡಾ ಒಬ್ಬರು. ಇದೀಗ ಅವರು ತಮ್ಮದೇ ಯೂಟ್ಯೂಬ್​ ಚಾನೆಲ್‌ವೊಂದನ್ನು ಆರಂಭಿಸಿದ್ದಾರೆ.

Share this Video
  • FB
  • Linkdin
  • Whatsapp

ಇತ್ತೀಚೆಗೆ ಯೂಟ್ಯೂಬ್​ ಎಂಬುದು ಎಲ್ಲರಿಗೂ ಹೊಸ ವೇದಿಕೆ ಆಗಿದೆ. ಜನಸಾಮಾನ್ಯರು ಕೂಡ ತಮ್ಮದೇ ಯೂಟ್ಯೂಬ್​ ಚಾನೆಲ್​ (YouTube Channel) ಆರಂಭಿಸಿ, ಅದರಿಂದ ಹಣ ಗಳಿಸುತ್ತಾರೆ. ಸೆಲೆಬ್ರಿಟಿಗಳು ಸಹ ಈ ವಿಚಾರದಲ್ಲಿ ಹಿಂದಿ ಬಿದ್ದಿಲ್ಲ. ಅನೇಕ ನಟ-ನಟಿಯರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಅದರಿಂದಲೂ ಅವರು ಹಣ ಗಳಿಸುತ್ತಾರೆ. ಈಗ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಇದೇ ಹಾದಿಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತಾಗಿ Know More About Me, Maybe ಎನ್ನುವ ಶೀರ್ಷಿಕೆಯೊಂದಿಗೆ ಸಂಕ್ಷಿಪ್ತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Rashmika Mandanna: ಮುಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಬೇಕು ಎಂದ ಶ್ರೀವಲ್ಲಿ!

ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ (Instagram) 29 ಕ್ಕೂ ಅಧಿಕ ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ರಶ್ಮಿಕಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸೋಶಿಯಲ್ ಮೀಡಿಯಾ (Social Media) ಫಾಲೋವರ್ಸ್ ಹೊಂದಿರುವ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಉಡುಗೆ ತೊಡುಗೆ, ಪ್ರವಾಸ, ಸಿನಿಮಾ, ಆಹಾರ ಕುರಿತಾದ ಅಪ್ಡೇಟ್‌ಗಳನ್ನು ರಶ್ಮಿಕಾ ಆಗಾಗ ನೀಡುತ್ತಲೇ ಇರುತ್ತಾರೆ. ಈಗ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಚಿತ್ರದ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video