ಸಮಂತಾ, ರಶ್ಮಿಕಾ, ದೀಪಿಕಾರಲ್ಲಿ ಕಾಸ್ಟ್ಲಿ ನಟಿ ಯಾರು?: ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್ಸ್‌ ಪಟ್ಟಿ ಇಲ್ಲಿದೆ

ಬಾಲಿವುಡ್ ಬ್ಯೂಟಿಫುಲ್ ಹೀರೋಯಿನ್ಸ್ ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಾಗಿದ್ದಾರೆ.
 

First Published Jun 26, 2023, 1:12 PM IST | Last Updated Jun 26, 2023, 1:12 PM IST

ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿಯರು ಯಾರಪ್ಪಾ ಅಂತ ನೋಡಿದ್ರೆ ಸದ್ಯಕ್ಕೆ ಕಣ್ ಮುಂದೆ ಬರೋದೇ ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ನಯನತಾರಾ, ಸಮಂತಾ, ಈಗ ಎಂಟ್ರಿ ಆಗಿರೋದು ಶ್ರೀಲೀಲಾ. ಆದ್ರೆ ಇವರೆಲ್ಲರಲ್ಲಿ ಅತಿ ಹೆಚ್ಚು ಸಂಭಾವನೆ ಯಾರ ಪರ್ಸ್ ಸೇರುತ್ತೆ ಗೊತ್ತಾ? ಅದು ಬಾಲಿವುಡ್ ಬ್ಯೂಟಿಫುಲ್ ಹೀರೋಯಿನ್ಸ್ ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್. ದೀಪಿಕಾ ಒಂದು ಸಿನಿಮಾಗೆ 10 ಕೋಟಿ ಚಾರ್ಜ್ ಮಾಡಿದ್ರೆ, ಆಲಿಯಾ ಭಟ್ ಕೂಡ ಅದೇ ಸಂಭಾವನೆ ಪಡೆಯುತ್ತಿದ್ದಾರೆ.ನಟಿ ಐಶ್ವರ್ಯ ರೈ.. 90ರ ದಶಕದಿಂದ ಬರೋಬ್ಬರಿ 15 ವರ್ಷ ಹಿಂದಿ ಚಿತ್ರರಂಗವನ್ನ ಆಳಿದ್ದ ಈ ಚೆಲುವೆ ಮದುವೆ ಬಳಿಕ ಮಂಕಾಗಿದ್ರು. ಆದ್ರೆ ಮಣಿರತ್ನಂ ಸಿನಿಮಾದಿಂದ ಐಶುಗೆ ಐಶ್ವರ್ಯ ಒಲಿದು ಬರುತ್ತಿದೆ. ಯಾಕಂದ್ರೆ ಐಶ್ವರ್ಯ ರೈ ಪೊನ್ನಿಯಿನ್ ಸೆಲ್ವನ್ ಸಿನಿಮಾಗೆ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆದಿದ್ದು, ಈಗಿನ ಹೀರೋಯಿನ್ಸ್ಗೆ ಸೆಡ್ಡು ಹೊಡೆದಿದ್ದಾರೆ.ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಅಂತ ನೀವ್ ಹುಡುಕಿದ್ರೆ. ಈಗ ಸಿಗೋ ಉತ್ತರ ತ್ರಿಷಾ ಕೃಷ್ಣನ್.ನ್ಯಾಷನಲ್ ಕ್ರಶ್ ರಶ್ಮಿಕಾ ಏನು ಕಡಿಮೆ ಅಲ್ಲ. ಅಲ್ಲಿ ಇಲ್ಲಿ ಅಂತ ಎಲ್ಲಾಕಡೆ ಸಲ್ಲುತ್ತಿರೋ ರಶ್ಮಿಕಾ ಮಂದಣ್ಣ ಒಂದ್ ಸಿನಿಮಾಗೆ 8 ರಿಂದ 10 ಕೋಟಿ ಚಾರ್ಜ್ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಕೋಟಿ ಕೋಟಿ ಬೆಲೆಯ ಕಾರುಗಳ ಒಡೆಯ ಯಶ್‌: ರಾಕಿಂಗ್ ಸ್ಟಾರ್ ಬಳಿ ಯಾವೆಲ್ಲಾ ಕಾರುಗಳಿವೆ..?