
ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಲು Darshan Thoogudeepa ಮಾಡ್ಕೊಂಡ ತಪ್ಪೇನು? ಮುಂದಿರೋ ದಾರಿ ಏನು?
ದರ್ಶನ್ಗೆ ಹೈಕೋರ್ಟ್ ಕೊಟ್ಟಿದ್ದ ಜಾಮೀನು ರದ್ದಾಗಿದೆ.. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಕಂಬಿ ಹಿಂದೆ ನಿಲ್ಲೋ ಹಾಗಾಗಿದೆ. ಅಷ್ಟಕ್ಕೂ ಈ ಮಹತ್ವದ ತೀರ್ಪಿನ ಹಿಂದಿರೋ ಕತೆ ಏನು? ದರ್ಶನ್ ಮುಂದಿರೋ ದಾರಿ ಏನು? ರೇಣುಕಾಸ್ವಾಮಿ ಕುಟುಂಬ ಈಗ ಏನ್ ಹೇಳುತ್ತೆ? ದರ್ಶನ್ ಭವಿಷ್ಯ ಏನಾಗಲಿದೆ?
ಹಾಗಾದ್ರೆ ಇಲ್ಲಿಂದ ಮುಂದೆ ದರ್ಶನ್ ಏನು ಮಾಡೋಕೆ ಸಾಧ್ಯ? ಆತನ ಮುಂದಿರೋ ಬೇರೆ ದಾರಿ ಏನು? ಸುಪ್ರೀಮ್ ಕೋರ್ಟೇ ಜಾಮೀನು ರದ್ದುಗೊಳಿಸಿದ ಮೇಲೆ, ಮುಂದೇನು ಮಾಡೋಕೆ ಸಾಧ್ಯ? ಅದೆಲ್ಲದರ ಕಂಪ್ಲೀಟ್ ಸ್ಟೋರಿ ನೋಡೋ ಮುಂಚೆ, ಒಂದು ಸ್ಮಾಲ್ ಬ್ರೇಕ್..ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕೇವಲ ಒಂದು ಕ್ರೈಮ್ ಕಥೆಯಾಗಿ ಉಳಿದಿಲ್ಲ. ಇದು ಕಾನೂನು, ಜನಪ್ರಿಯತೆ, ನ್ಯಾಯ ಮತ್ತು ಅಧಿಕಾರಗಳ ನಡುವಿನ ಸಂಘರ್ಷದ ಕಥೆಯಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪು, ಕಾನೂನಿನ ಮುಂದೆ ಯಾವುದೇ ಸ್ಟಾರ್‌ಗಳಾಗಲಿ ಅಥವಾ ರಾಜಕಾರಣಿಗಳಾಗಲಿ ದೊಡ್ಡವರಲ್ಲ ಅನ್ನೋ ಬಲವಾದ ಸಂದೇಶವನ್ನ ಇಡೀ ದೇಶಕ್ಕೆ ನೀಡಿದೆ..