ಅಮ್ಮನ ನೆನಪಿನಲ್ಲಿ ಸದಾ ಇರುತ್ತೇನೆ, ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ: ವಿನೋದ್ ರಾಜ್‌

ಇಷ್ಟು ವರ್ಷ ಅವರ ಜೊತೆಗೆ ಖುಷಿಯಾಗಿ ಕಾಲಕಳೆದಿದ್ದೇನೆ. ಅವರ ನೆನಪಿನಲ್ಲಿಯೇ ನಾನು ಸದಾ ಇರುತ್ತೇನೆ ಎಂದು ನಟ ವಿನೋದ್ ರಾಜ್‌ ಹೇಳಿದ್ದಾರೆ.
 

First Published Dec 9, 2023, 12:35 PM IST | Last Updated Dec 9, 2023, 12:35 PM IST

ಕ್ಷಣಕ್ಷಣಕ್ಕೂ ಬೇಸರ ಹೆಚ್ಚಾಗುತ್ತಿದೆ. ಸ್ವಲ್ಪ ಹೊತ್ತಷ್ಟೆ ಅಮ್ಮ ಜೊತೆಗಿರ್ತಾರೆ. ಕ್ಷಣಗಳು ಉರುಳಳುತ್ತಿದ್ದಂತೆ ಅಮ್ಮ ನಮ್ಮ ಜೊತೆ ಇರಲ್ಲ ಅಂತ ಬೇಸರ ಜಾಸ್ತಿಯಾಗ್ತಿದೆ ಎಂದು ನಟ ವಿನೋದ್‌ ರಾಜ್‌ (Vinod raj) ಬೇಸರದ ಮಾತುಗಳನ್ನಾಡಿದರು. ನಿನ್ನೆ ಬೆಳಿಗ್ಗೆ ಮಾತಾಡಿದ್ರು ಚೆನಾಗಿದ್ರು. ಆದ್ರೆ ಕೈ ನೋಯ್ತಿದೆ ಅಂತಾ ಹೇಳಿದ್ರು. ನನ್ನ ಜೊತೆಗೆ ಇದ್ರು, ಇಷ್ಟು ವರ್ಷ ಅವ್ರ ಜೊತೆಗೆ ಖುಷಿಯಾಗಿ ಕಾಲಕಳೆದಿದ್ದೇನೆ. ಅವ್ರ ಪ್ರೀತಿಯ ನಾಯಿ(Dog) ನಿನ್ನೆ ಅಮ್ಮ ಅಂತಿತ್ತು. ಅಮ್ಮನಿಲ್ಲದ ಮನೆಯಲ್ಲಿ ಶ್ವಾನ ಕಣ್ಣೀರು  ಹಾಕ್ತಿದೆ. ಅಮ್ಮನಿಗೆ ನೆಚ್ಚಿನ ಶ್ವಾನ ಆಗಿದ್ದು, ಜೊತೆಗೆ ಬಹಳ ಪ್ರೀತಿ ಹೊಂದಿದ್ದರು. ಲೀಲಾವತಿ(Leelavathi)ಅವರ ನೆನಪಿನಲ್ಲಿ ಸದಾ ನಾನು ಇರುತ್ತೇನೆ. ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ ಎಂದು ನಟ ವಿನೋದ್‌ ರಾಜ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಲೀಲಾವತಿಯವರ ಸಾಧನೆ, ಸಾರ್ಥಕತೆ ನಮಗೆಲ್ಲಾರಿಗೂ ಒಂದು ದೊಡ್ಡ ಆದರ್ಶ: ಡಿಸಿಎಂ ಡಿಕೆಶಿ

Video Top Stories