Asianet Suvarna News Asianet Suvarna News

ಲೀಲಾವತಿಯವರ ಸಾಧನೆ, ಸಾರ್ಥಕತೆ ನಮಗೆಲ್ಲಾರಿಗೂ ಒಂದು ದೊಡ್ಡ ಆದರ್ಶ: ಡಿಸಿಎಂ ಡಿಕೆಶಿ

ಲೀಲಾವತಿ ಸಾಧನೆ, ಸಾರ್ಥಕತೆ ನಮ್ಮೆಲ್ಲಾರಿಗೂ ಒಂದು ದೊಡ್ಡ ಆದರ್ಶವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. 
 

ಒತ್ತಡವಿದ್ದರೂ ಕೂಟ ಎಲ್ಲಾವನ್ನು ಕ್ಯಾನ್ಸಲ್ ಮಾಡಿ ಅಂದು ಅವರ ಆಸ್ಪತ್ರೆ ಉದ್ಘಾಟನೆಗೆ ಬಂದಿದ್ದೆ.ಇದರಿಂದ ನನಗೂ ಸಂತೋಷವಾಯಿತು. ತುಂಬಾ ಶ್ರಮಪಟ್ಟು ಆಸ್ಪತ್ರೆಯನ್ನು ಕಟ್ಟಿದ್ದಾರೆ. ಆದ್ರೂ ಭಗವಂತನ ಲೀಲೆ ಹುಟ್ಟಿದ ಮೇಲೆ ಒಂದು ದಿನ ನಮ್ಮವರನ್ನ ಕಳೆದುಕೊಳ್ಳಬೇಕು.ಲೀಲಾವತಿ(Leelavathi) ಸಾಧನೆ, ಸಾರ್ಥಕತೆ ನಮ್ಮೆಲ್ಲಾರಿಗೂ ಒಂದು ದೊಡ್ಡ ಆದರ್ಶವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌(DCM D.K. Shivakumar) ಹೇಳಿದರು. ಅಲ್ಲದೇ ಸಕಲ ಸರ್ಕಾರಿ ಗೌರವದೊಂದಿಗೆ ಅವರಿಗೆ ಸರ್ಕಾರ ಗೌರವ ಸಲ್ಲಿಸಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಇದಕ್ಕೆ ಆದೇಶ ನೀಡಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿದರು. 

ಇದನ್ನೂ ವೀಕ್ಷಿಸಿ:  ಭಾರತ ಕಂಡ ಶ್ರೇಷ್ಠ ನಟಿ ಲೀಲಾವತಿ, ವಿನೋದ್‌ಗೆ ಅವರ ಕನಸು ಈಡೇರಿಸುವ ಶಕ್ತಿ ನೀಡಲಿ: ನಟ ಉಪೇಂದ್ರ

Video Top Stories