ಒಂದೇ ಫ್ರೇಮ್‌ನಲ್ಲಿ ಟೈಗರ್ ಪ್ರಭಾಕರ್ ಮಗ - ಜಯಮಾಲಾ ಮಗಳು: ಜೊತೆಯಾಗಿ ಫೋಟೋ ತೆಗೆಸಿಕೊಂಡ ಅಣ್ಣ-ತಂಗಿ..!

ವಿನೋದ್- ಸೌಂದರ್ಯ ಇಂದಿಗೂ ಎಂದೆಂದಿಗೂ ಅಣ್ಣ ತಂಗಿಯೇ. ಆದ್ರೆ ಅವರಿಬ್ಬರನ್ನು ಅವರ ಅಕ್ಕಪಕ್ಕದವರು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ. 
 

First Published Jun 12, 2023, 12:03 PM IST | Last Updated Jun 12, 2023, 3:44 PM IST

ಟೈಗರ್ ಪ್ರಭಾಕರ್ ಅವರ ಮೊದಲ ಪತ್ನಿಯ ಮಗ ವಿನೋದ್ ಪ್ರಭಾಕರ್ ಆಗಿದ್ದರೆ, ಎರಡನೇ ಪತ್ನಿ ಜಯಮಾಲಾ ಮಗಳು ಸೌಂದರ್ಯ. ಜಯಮಾಲಾ ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರಿಗೂ ಪರಸ್ಪರರ ಮೇಲೆ ಅಸಮಾಧಾನ, ಹಗೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರಿ ಟೈಗರ್ ವಿನೋದ್ ಪ್ರಭಾಕರ್- ಸೌಂದರ್ಯ ಜಯಮಾಲಾ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಬ್ಬರನ್ನೊಬ್ಬರ ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ. ಒಟ್ಟಿಗೆ ಆಡುತ್ತಾ ಬೆಳೆದ ಇವರಿಬ್ಬರು ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದೂ ಬಿಟ್ರೆ, ಅವರ ನಡುವೆ ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಸಂಬಂಧವೇನು ಅಳಸಿರಲಿಲ್ಲ.

ಇದನ್ನೂ ವೀಕ್ಷಿಸಿ: ನನ್ನಿಂದ ಆಗುವ ಕೆಲಸವನ್ನು ಮಾಡುತ್ತೇನೆ, ನಿಂಗವ್ವ ನನ್ನ ಭೇಟಿಯಾಗು ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

 

Video Top Stories