
ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
ದರ್ಶನ್ ಪುತ್ರ ವಿನೀಶ್ ಇತ್ತೀಚಿಗೆ ತಾನು ಓದುತ್ತಿರೋ ಶಾಲೆಯ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಅಪ್ಪನ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಇದನ್ನ ಶೇರ್ ಮಾಡ್ತಾ ಇರೋ ದರ್ಶನ್ ಫ್ಯಾನ್ಸ್, ಇವನು ಅಪ್ಪನಿಗೆ ತಕ್ಕ ಮಗ, ಜೂನಿಯರ್ ದಾಸ ಅಂತಿದ್ದಾರೆ.
ದರ್ಶನ್ (Darshan Thoogudeepa) ಪುತ್ರ ವಿನೀಶ್, ತನ್ನ ಸ್ಕೂಲ್ ನಲ್ಲಿ ಅಪ್ಪನ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ. ವಿನೀಶ್ ದರ್ಶನ್ (Vineesh Darshan) ವಿಡಿಯೋ ಶೇರ್ ಮಾಡ್ತಿರೋ ದರ್ಶನ್ ಫ್ಯಾನ್ಸ್ ಜ್ಯೂನಿಯರ್ ದಾಸ ಅಂತ ಬಿರುದು ಕೊಡ್ತಾ ಇದ್ದಾರೆ. ಅಸಲಿಗೆ ಈಗಾಗ್ಲೇ ಎರಡು ಚಿತ್ರಗಳಲ್ಲಿ ನಟಿಸಿರೋ ವಿನೀಶ್ ದರ್ಶನ್ ಬಣ್ಣದ ದುನಿಯಾಗೆ ಬರೋದಕ್ಕೆ ಸಜ್ಜಾಗ್ತಾ ಇದ್ದಾನೆ.
ಜೂನಿಯರ್ ದಾಸನ ಡ್ಯಾನ್ಸ್ ಧಮಾಕಾ
ದರ್ಶನ್ ಪುತ್ರ ವಿನೀಶ್ ಇತ್ತೀಚಿಗೆ ತಾನು ಓದುತ್ತಿರೋ ಶಾಲೆಯ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಅಪ್ಪನ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಇದನ್ನ ಶೇರ್ ಮಾಡ್ತಾ ಇರೋ ದರ್ಶನ್ ಫ್ಯಾನ್ಸ್, ಇವನು ಅಪ್ಪನಿಗೆ ತಕ್ಕ ಮಗ, ಜೂನಿಯರ್ ದಾಸ ಅಂತಿದ್ದಾರೆ. ಮಗನ ಪರ್ಫಾರ್ಮೆನ್ಸ್ನ ತಾಯಿ ವಿಜಯಲಕ್ಷ್ಮೀ ಕೂಡ ಕಣ್ತುಂಬಿಕೊಂಡಿದ್ದಾರೆ.
ತೂಗುದೀಪ ಕುಟುಂಬದ 3ನೇ ತಲೆಮಾರು..!
ವಿನೀಶ್ಗೇನೂ ಬಣ್ಣದ ನಂಟು ಹೊಸತಲ್ಲ. ತಾತ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ. ಅಪ್ಪ ಕನ್ನಡ ಚಿತ್ರರಂಗದ ಸ್ಟಾರ್ ನಟ, ಚಿಕ್ಕಪ್ಪ ದಿನಕರ್ ಹೆಸರಾಂತ ನಿರ್ದೇಶಕ. ಇಂಥಾ ಫ್ಯಾಮಿಲಿಯ ವಿನೀಶ್ಗೆ ಬಣ್ಣದ ಕಡೆಗೆ ಆಕರ್ಷಣೆ ಬಂದ್ರೆ ಅಚ್ಚರಿಯೇನಿಲ್ಲ.
2 ಚಿತ್ರಗಳಲ್ಲಿ ನಟಿಸಿರೋ ವಿನೀಶ್ ದರ್ಶನ್..!
ಹೌದು ವಿನೀಶ್ ದರ್ಶನ್ ಈಗಾಗ್ಲೇ ಎರಡು ಸಿನಿಮಾಗಳಲ್ಲಿ ನಟನೆ ಮಾಡಿದ್ದಾನೆ. ದರ್ಶನ್ ನಟನೆಯ ಐರಾವತ ಚಿತ್ರದ ಕೊನೆಯಲ್ಲಿ ಖಾಕಿ ತೊಟ್ಟು ಛೋಟಾ ಪೊಲೀಸ್ ಆಗಿ ಅಪ್ಪನ ಜೊತೆಗೆ ಪೋಸ್ ಕೊಟ್ಟಿದ್ದ.
ಇನ್ನೂ ಯಜಮಾನ ಚಿತ್ರದ ಹಾಡಿನಲ್ಲಿ ಅಪ್ಪನ ಜೊತೆಗೆ ಹೆಜ್ಜೆ ಹಾಕಿದ್ದ. ಆಗಲೇ ದರ್ಶನ್ ಫ್ಯಾನ್ಸ್ ದಾಸನ ಜೊತೆಗೆ ಈ ಜ್ಯೂನಿಯರ್ ದಾಸನ ಕಟೌಟ್ಸ್ ನಿಲ್ಲಿಸಿದ್ರು. ಅಪ್ಪನಂತೆಯೇ ಆಜಾನುಬಾಹು ಆಗಿರೋ ವಿನೀಶ್, ಮುಂದೆ ಸಿನಿರಂಗಕ್ಕೆ ಬಂದ್ರು ಅಚ್ಚರಿಯೇನಿಲ್ಲ. ದಾಸನ ಫ್ಯಾನ್ಸ್ ಅಂತೂ ಈತನನ್ನ ಜೂನಿಯರ್ ದಾಸ ಅಂತ ಮೆರೆಸೋದಕ್ಕೆ ಸಜ್ಜಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..