Vijayanand Movie: ಡಿ. 9ರಂದು 'ವಿಜಯಾನಂದ' ರಿಲೀಸ್: ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ
ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಗಾಥೆ ಸಿನಿಮಾ ಆಗಿ ಬೆಳ್ಳಿತೆರೆ ಮೇಲೆ ಬರುತ್ತಿದೆ. ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಅನ್ನೋದು ವಿಶೇಷ.
'ವಿಜಯಾನಂದ' ಸಿನಿಮಾ ಡಿಸೆಂಬರ್ 9ರಂದು ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದ್ದು, ವಿಜಯ್ ಸಂಕೇಶ್ವರ್ ಅವರೇ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾಗೆ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದು, ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಾಯಕನಾಗಿ ನಿಹಾಲ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಸಿರಿ ಪ್ರಹ್ಲಾದ ನಟಿಸಿದ್ದು, ವಿಜಯ್ ಸಂಕೇಶ್ವರ್ ಅವರ ಪುತ್ರ ಆನಂದ್ ಸಂಕೇಶ್ವರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
BBK9 ನಾನು ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಬೆದರಿಕೆ, ದೂರು ದಾಖಲು