ಸ್ಪಂದನಾ ಒಬ್ಬರಲ್ಲ, ಇಬ್ಬರು ಮಕ್ಕಳ ಬಿಟ್ಟು ಹೋದಳು: ನಿರ್ದೇಶಕ ತರುಣ್ ಸುಧೀರ್ ಅಳಲು

ಎಷ್ಟು ಸಾರಿ ಸ್ಪಂದನಾ ನಮಗೆ ಅಡುಗೆ ಮಾಡಿ ಹಾಕಿದ್ದಾರೆ ಎಂಬುದನ್ನು ಲೆಕ್ಕವಿಡಲಾಗದು. ಅನೇಕ ಸಲ ಶೂಟಿಂಗ್ ಸ್ಪಾಟ್‌ಗೂ ಅವರು ಊಟ ತಂದು ನೀಡಿದ್ದಾರೆ. ಅವರು ನಮ್ಮನ್ನ ಅನ್ನಪೂರ್ಣೇಶ್ವರಿ ತರ ನೋಡಿಕೊಂಡಿದ್ದಾರೆ ಸ್ಪಂದನಾ ವಿಜಯ ರಾಘವೇಂದ್ರ ನಿಧನಕ್ಕೆ ನಿರ್ದೇಶಕ ತರುಣ್ ಸುಧೀರ್ ಸಂತಾಪ, 

Share this Video
  • FB
  • Linkdin
  • Whatsapp

ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ನನ್ನ ಕುಟುಂಬದ ತರ ಅವರ ಮನೆಯಲ್ಲೇ ಏನೇ ಸಮಾರಂಭವಾದರೂ ನಮ್ಮನ್ನು ಕರೆಯುತ್ತಿದ್ದರು. ಎಷ್ಟು ಸಾರಿ ಸ್ಪಂದನಾ ನಮಗೆ ಅಡುಗೆ ಮಾಡಿ ಹಾಕಿದ್ದಾರೆ ಎಂಬುದನ್ನು ಲೆಕ್ಕವಿಡಲಾಗದು. ಅನೇಕ ಸಲ ಶೂಟಿಂಗ್ ಸ್ಪಾಟ್‌ಗೂ ಅವರು ಊಟ ತಂದು ನೀಡಿದ್ದಾರೆ. ಅವರು ನಮ್ಮನ್ನ ಅನ್ನಪೂರ್ಣೇಶ್ವರಿ ತರ ನೋಡಿಕೊಂಡಿದ್ದಾರೆ. ಇದು ನನಗೇ ಶಾಕಿಂಗ್ ಎನಿಸಿದೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ರಾಘು ಇದನ್ನು ಹೇಗೆ ಸಹಿಸಿಕೊಳ್ಳುವನೋ ತಿಳಿಯದು. ರಾಘು ಹಾಗೂ ಮಗ ಶೌರ್ಯ ಇಬ್ಬರೂ ಸ್ಪಂದನಾ ಮೇಲೆ ಡಿಫೆಂಡ್ ಆಗಿದ್ದವರು. ಸ್ಪಂದನಾ ಒಬ್ಬರಲ್ಲ ಇಬ್ಬರೂ ಮಕ್ಕಳನ್ನು ಬಿಟ್ಟು ಹೋದಂತೆ ಅನಿಸುತ್ತಿದೆ. ಶೌರ್ಯನಿಗೂ ರಾಘೂವಿಗೂ ಏನೂ ವ್ಯತ್ಯಾಸವಿಲ್ಲ. ಮನಸ್ಸು ಮುರಿದು ಹೋಯ್ತು. ಇಷ್ಟು ಒಳ್ಳೆಯವರಿಗೆ ಏಕೆ ಹೀಗಾಗ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ನಿರ್ದೇಶಕ ತರುಣ್ ಸುಧೀರ್ ಭಾವುಕರಾಗಿದ್ದಾರೆ.

Related Video