ಇಳಿವಯಸ್ಸಲ್ಲೂ ಐಟಂ ಹಾಡಿನದ್ದೇ ಗುಂಗು; ಸಿವಿ ಶಿವಶಂಕರ್ ಫನ್ನಿ ವಿಡಿಯೋ ನೆನಪಿಸಿಕೊಂಡ ಜನ!

'ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ..' ಹಾಡು ಬರೆದಿದ್ದ ನಟ/ನಿರ್ದೇಶಕ ಸಿ ವಿ ಶಿವಶಂಕರ್ ನಿಧರಾಗಿದ್ದಾರೆ. ಸಿನಿಮಾರಂಗದಲ್ಲಿ ಪರಿಚಿತರಾಗಿದ್ದ ಸಿವಿ ಶಿವಶಂಕರ್‌ ಇತ್ತೀಚಿನ ದಿನಗಳಲ್ಲಿ ತಮ್ಮ ಜನಪ್ರಿಯ ರೀಲ್ಸ್‌ ಒಂದರಿಂದ ವೈರಲ್‌ ಆಗಿದ್ದರು.

First Published Jun 27, 2023, 6:15 PM IST | Last Updated Jun 27, 2023, 6:27 PM IST

ಬೆಂಗಳೂರು (ಜೂ.27): ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಸಿವಿ ಶಿವಶಂಕರ್‌ ಮಂಗಳವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಸಿನಿಮಾ ರಂಗದಲ್ಲಿದ್ದವರ ಪಾಲಿಗೆ ಚಿರಪರಿಚಿತರಾಗಿದ್ದ ಸಿವಿ ಶಿವಶಂಕರ್‌, ಇತ್ತೀಚಿಗೆ ತಮ್ಮ ರೀಲ್ಸ್‌ವೊಂದರಿಂದ ವೈರಲ್‌ ಆಗಿದ್ದರು.

ಪುತ್ರ ಲಕ್ಷ್ಮಣ್‌ ಭಾರದ್ವಾಜ್ ಹಾಗೂ ಸಿವಿ ಶಿವಶಂಕರ್‌ ಅವರು ಈ ವಿಡಿಯೋದಲ್ಲಿದ್ದರು. ಅಪ್ಪನಿಗೆ ಮೊಬೈಲ್‌ನಲ್ಲಿ ವಿಷ್ಣು ಸಹಸ್ರನಾಮ ಪ್ಲೇ ಮಾಡುವುದು ಹೇಗೆ ಎನ್ನುವುದನ್ನು ವಿವರಿಸುತ್ತಾ ಅದನ್ನು ಪ್ಲೇ ಮಾಡುತ್ತಾರೆ. ಅದರ ಬೆನ್ನಲ್ಲಿಯೇ ಅಪ್ಪನ ಕೈಯಲ್ಲಿ ಮೊಬೈಲ್‌ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಅವರು ವಿಷ್ಣು ಸಹಸ್ರನಾಮ ನಿಲ್ಲಿಸಿ, 'ಐಟಂ ಸಾಂಗ್‌' ಎಂದು ಹೇಳುತ್ತಾರೆ. ನನಗೆ ವಿಷ್ಣು ಸಹಸ್ರನಾಮ ಬರುತ್ತೆ ಎಂದು ಅವರು ಹೇಳುವ ಬೆನ್ನಲ್ಲೇ, ಪುಷ್ಪಾ ಚಿತ್ರದ 'ಊ ಅಂಟಾವಾ, ಊಹೂಂ ಅಂಟಾವ' ಹಾಡು ಪ್ಲೇ ಆಗುತ್ತದೆ. ತಪಾಷೆಯ ಈ ವಿಡಿಯೋ ಸೋಶಿಯಲ್‌ ಮೀಡಿಯಾ ಹಾಗೂ ವಾಟ್ಸಾಪ್‌ನಲ್ಲಿ ಜನಪ್ರಿಯವಾಗಿತ್ತು.

CV Shivashankar Death: ಹಿರಿಯ ನಟ, ನಿರ್ದೇಶಕ ಸಿವಿ ಶಿವಶಂಕರ್​ ಹೃದಯಾಘಾತದಿಂದ ನಿಧನ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ವಾಸವಾಗಿದ್ದ ಶಿವಶಂಕರ್‌ ಅವರು ಹೃದಯಾಘಾತದಿಂದ ಸಾವು ಕಂಡಿದ್ದಾರೆ, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅವರು ಬದುಕುಳಿಯಲಿಲ್ಲ. . ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಸಿ ವಿ ಶಿವಶಂಕರ್ ಅವರ ಅಂತ್ಯಕ್ರಿಯೆ ನಡೆಯಲಿದೆ.