ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗೀತ ರಚನೆಗಾರ ಸಿವಿ ಶಿವಶಂಕರ್ ನಿಧನರಾಗಿದ್ದಾರೆ. 

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗೀತ ರಚನೆಗಾರ ಸಿವಿ ಶಿವಶಂಕರ್ ನಿಧನರಾಗಿದ್ದಾರೆ. ಇಂದು (ಜೂನ್ 27) ಮಾಧ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ. ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಶಿವಶಂಕರ್ ಅವರ ನಿಧನದ ಬಗ್ಗೆ ಕುಟುಂಬದವರು ಅಧಿಕೃತಗೊಳಿಸಿದ್ದು ‘ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಇರಲಿಲ್ಲ. ಮಧ್ಯಾಹ್ನ ಊಟ ಮುಗಿಸಿದರು. ಪೂಜೆ ಮಾಡಿದ ಬಳಿಕ ಹಾರ್ಟ್​ ಅಟ್ಯಾಕ್​ ಆಯಿತು’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸಿ.ವಿ. ಶಿವಶಂಕರ್​ ಅವರ ನಿಧನಕ್ಕೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ. 

ಇಳಿವಯಸ್ಸಲ್ಲೂ ಐಟಂ ಹಾಡಿನದ್ದೇ ಗುಂಗು; ಸಿವಿ ಶಿವಶಂಕರ್ ಫನ್ನಿ ವಿಡಿಯೋ ನೆನಪಿಸಿಕೊಂಡ ಜನ!

ರಂಗಭೂಮಿ ಕಲಾವಿದರಾಗಿದ್ದ ಶಿವಶಂಕರ್ ಬಳಿಕ ಸಿನಿಮಾರಂಗ ಪ್ರವೇಶ ಮಾಡಿದರು. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶ ಮಾಡಿದರು. ಅನೇಕ ನಾಟಕಗಳಲ್ಲಿ ಅಭಿನಂಯಿಸಿ ಸೈ ಎನಿಸಿಕೊಂಡವರು. ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶಿವಶಂಕರ್ ಸ್ಕೂಲ್ ಮಾಸ್ಟರ್, ಕೃಷ್ಣ ಗಾರುಡಿ, ರತ್ನಮಂಜರಿ, ರತ್ನಗಿರಿ ರಹಸ್ಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅನೇಕ ನಿರ್ದೇಶಕರ ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದ ಶಿವಶಂಕರ್ ಬಳಿಕ ಮನೆ ಕಟ್ಟಿ ನೋಡು ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದರು. 

ಭೀಕರ ರಸ್ತೆ ಅಪಘಾತ: 'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ದೇವರಾಜ್ ನಿಧನ

ಅನೇಕ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪದವೀಧರ, ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾ ತಪಸ್ವಿ, ಕನ್ನಡ ಕುವರ, ವೀರ ಮಹಾದೇವ ಮತ್ತಿತರ ಸಿನಿಮಾಗಳಿಗೆ ಸಿ.ವಿ. ಶಿವಶಂಕರ್​ ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದರು. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..’ ಹಾಡನ್ನು ಬರೆಯುವ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈ ಹಾಡು ಇಂದಿಗೂ ಫೇಮಸ್. ಕನ್ನಡದಾ ರವಿಮೂಡಿ ಬಂದಾ, ಮುನ್ನಡೆಯ ಬೆಳಕನ್ನು ತಂದಾ, ನಾಡಚರಿತೆ ನೆನಪಿಸುವ ವೀರ ಗೀತೆಯಾ, ಹಾಡು ನೀನು ಕನ್ನಡಿಗಾ ದೇಶಗೀತೆಯ ಸೇರಿದಂತೆ ಅನೇಕ ಜನಪ್ರಿಯ ಗೀತೆಗಳನ್ನು ರಚಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.