'ಉಪಾಧ್ಯಕ್ಷ' ಶೂಟಿಂಗ್ ಮುಕ್ತಾಯ: ಚಿಕ್ಕಣ್ಣನ ಸಿನಿಮಾದಲ್ಲಿ ಇಲ್ಲ ಡಬಲ್ ಮೀನಿಂಗ್

ಉಪಾಧ್ಯಕ್ಷ ಚಿತ್ರದ ಚಿತ್ರೀಕರಣ ಇಂದಿಗೆ ಸಂಪೂರ್ಣವಾಗಿದೆ. ಸಾಂಗ್‌ ಮುಖಾಂತರ ಒಳ್ಳೆ ಸೆಟ್ ಅನ್ನು ಹಾಕಿದ್ದೇವೆ ಎಂದು ನಿರ್ದೇಶಕ ಅನಿಲ್ ತಿಳಿಸಿದ್ದಾರೆ.
 

Share this Video
  • FB
  • Linkdin
  • Whatsapp

ಉಪಾಧ್ಯಕ್ಷ ಸಿನಿಮಾದ ಚಿತ್ರೀಕರಣ 60-70 ದಿನಗಳಲ್ಲಿ ಮುಗಿಸಿದ್ದೇವೆ. ಅರ್ಜುನ್‌ ಜನ್ಯ ಸಂಗೀತವನ್ನು ನೀಡಿದ್ದು, ಸಿನಿಮಾದಲ್ಲಿ ಚಿಕ್ಕಣ್ಣ ತುಂಬಾ ಚೆನ್ನಾಗಿ ಡ್ಯಾನ್ಸ್‌ ಮಾಡಿದ್ದಾರೆ ಎಂದು ನಿರ್ದೇಶಕ ಅನಿಲ್ ತಿಳಿಸಿದರು. ಹಾಗೆ ನಾಯಕಿ ಕೂಡಾ ಕೊಟ್ಟ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂದು ಅಂದು ಕೊಂಡಿದ್ದೇವೆ. ಪ್ರೊಡ್ಯೂಸರ್‌ ಜತೆ ಮಾತನಾಡಿ ದಿನಾಂಕವನ್ನು ಗೊತ್ತು ಮಾಡುತ್ತೇವೆ. ನಿರ್ಮಾಪಕರು ಅದ್ದೂರಿಯಾಗಿ ಸೆಟ್‌ ಅನ್ನು ಹಾಕಿಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಜನಗಳ ಮುಂದೆ ಬರುತ್ತೇವೆ ಜನವರಿ ಮೊದಲ ವಾರದಲ್ಲಿ ಸಿನಿಮಾ ಟೀಸರ್‌ ರಿಲೀಸ್‌ ಮಾಡಬೇಕೆಂದು ಇದ್ದೇವೆ ಎಂದು ನಿರ್ದೇಶಕ ಅನಿಲ್ ಹೇಳಿದ್ದಾರೆ.

Related Video