)
ಇತ್ತ A-2, ಅತ್ತ A-11, ದಾಸನ ಬಲಗೈ ಬಂಟ ದೂರ? ದರ್ಶನ್ ಏಳುಬೀಳಿನ ಹಿಂದೆ ಬೆಟ್ಟದ ಮಹಿಮೆ!
ಚಾಮುಂಡಿ ಬೆಟ್ಟದಲ್ಲಿ ದರ್ಶನ್ರ ಮ್ಯಾನೇಜರ್ ಆಗಿದ್ದ ನಾಗರಾಜು ಕೂಡ ಕಾಣಿಸಿಕೊಂಡಿದ್ದಾನೆ. ಈತ ದರ್ಶನ್ ಪಾಲಿಗೆ ಬಲಗೈ ಬಂಟನಾಗಿದ್ದವನು. ದರ್ಶನ್ರ ಎಲ್ಲಾ ಕೆಲಸ ವ್ಯವಹಾರಗಳನ್ನ ಕೂಡ ನೋಡಿಕೊಳ್ತಾ ಇದ್ದಿದ್ದು ಇದೇ ನಾಗರಾಜು.
ಆಷಾಢ ಶುಕ್ರವಾರವಾದ ಇವತ್ತು ದರ್ಶನ್ ಫ್ಯಾಮಿಲಿ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಇನ್ನೊಂದು ಕಡೆಗೆ ದರ್ಶನ್ ಜೊತೆ ಕೊಲೆ ಕೇಸ್ನಲ್ಲಿ ಫಿಟ್ ಆಗಿದ್ದ ಅವರ ಮ್ಯಾನೇಜರ್ ನಾಗರಾಜು ಕೂಡ ಪ್ರತ್ಯೇಕವಾಗಿ ದೇವಿ ದರ್ಶನ ಮಾಡಿದ್ದಾನೆ. ಅಸಲಿಗೆ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಬದುಕಿನಲ್ಲಿ ತುಂಬಾನೇ ದೊಡ್ಡ ಸ್ಥಾನ ಇದೆ. ದಾಸನ ಹಲವು ಏಳು ಬೀಳುಗಳ ಹಿಂದೆ ಬೆಟ್ಟದ ಮಹಿಮೆ ಇದೆ. ದರ್ಶನ್ ಪತ್ನಿ ಸಮೇತ ಚಾಮುಂಡಿಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದಿದ್ದಾರೆ. ಆಷಾಡ ಮಾಸದಲ್ಲಿ ಅದ್ರಲ್ಲೂ ಅಮ್ಮನವರ ದಿನವಾದ ಶುಕ್ರವಾರ ದೇವಿ ದರ್ಶನ ಪಡೆಯೋದು ಶ್ರೇಯಸ್ಕರ ಅಂತ ಭಾವಿಸಲಾಗುತ್ತೆ. ಅಂತೆಯೇ ಇವತ್ತು ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ಸನ್ನಿಧಾನಕ್ಕ ಬೇಟಿ ಕೊಟ್ಟು ದೇವಿ ದರ್ಶನ ಪಡೆದಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ದರ್ಶನ್ ಕೂಡ ಪತ್ನಿ ವಿಜಯಲಕ್ಷ್ಮೀ ಜೊತೆಗೂಡಿ ದೇವಾಲಯಕ್ಕೆ ಬಂದಿದ್ದಾರೆ. ಸೋದರ ದಿನಕರ್ ಕೂಡ ಅಣ್ಣ, ಅತ್ತಿಗೆ ಜೊತೆಗೆ ಬಂದು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ವಿಶೇಷ ದರ್ಶನದಲ್ಲಿ ದೇವಿ ದರ್ಶನ ಪಡೆದ ದರ್ಶನ್ ಆ ಬಳಿಕ ಫ್ಯಾನ್ಸ್ಗೂ ದರ್ಶನ ಕೊಟ್ಟಿದ್ದಾರೆ. ಹೌದು! ಚಾಮುಂಡಿ ಬೆಟ್ಟದಲ್ಲಿ ದರ್ಶನ್ರ ಮ್ಯಾನೇಜರ್ ಆಗಿದ್ದ ನಾಗರಾಜು ಕೂಡ ಕಾಣಿಸಿಕೊಂಡಿದ್ದಾನೆ. ಈತ ದರ್ಶನ್ ಪಾಲಿಗೆ ಬಲಗೈ ಬಂಟನಾಗಿದ್ದವನು. ದರ್ಶನ್ರ ಎಲ್ಲಾ ಕೆಲಸ ವ್ಯವಹಾರಗಳನ್ನ ಕೂಡ ನೋಡಿಕೊಳ್ತಾ ಇದ್ದಿದ್ದು ಇದೇ ನಾಗರಾಜು. ದರ್ಶನ್ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಫಿಟ್ ಆದ ವೇಳೆ ನಾಗರಾಜುವನ್ನ ಕೂಡ ಪೊಲೀಸರು ಬಂಧಿಸಿದ್ರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಾಗರಾಜುವನ್ನ ಎ-11 ಆಗಿಸಿದ್ರು. ಸೋ ಒಡೆಯನ ಜೊತೆಗೆ ಬಂಟ ನಾಗರಾಜು ಕೂಡ ಜೈಲು ಸೇರಬೇಕಾಗಿತ್ತು.
ಬೇಲ್ ಸಿಕ್ಕು ಹೊರಬಂದ ಮೇಲೆ ನಾಗರಾಜು ದರ್ಶನ್ರಿಂದ ಅಂತರ ಕಾಯ್ದುಕೊಂಡು ಬಂದಿದ್ದಾನೆ. ದರ್ಶನ್ ನ ಭೇಟಿ ಮಾಡುವ ಗೋಜಿಗೆ ಹೋಗಿಲ್ಲ. ಇವತ್ತು ಚಾಮುಂಡಿ ಬೆಟ್ಟಕ್ಕೂ ದರ್ಶನ್ ಬಂದು ಹೋದ ಬಳಿಕ ನಾಗರಾಜು ಬಂದಿದ್ದಾನೆ. ಹೌದು ದರ್ಶನ್ ಪಾಲಿಗೆ ಚಾಮುಂಡಿ ಬೆಟ್ಟ ಬಹಳಾನೇ ವಿಶೇಷ. ಮೈಸೂರಿನಲ್ಲಿ ಹುಟ್ಟಿಬೆಳೆದ ದರ್ಶನ್ ಅಪ್ಪ-ಅಮ್ಮನ ಜೊತೆಗೆ ಚಿಕ್ಕಂದಿನಿಂದಲೂ ಬೆಟ್ಟಕ್ಕೆ ಹೋಗ್ತಾ ಇದ್ರು. ನಟನಾ ಶಾಲೆಗೆ ಸೇರುವ ಮುನ್ನ, ಸಿನಿಮಾ ಮಾಡುವ ಮುನ್ನ ದರ್ಶನ್ ದೇವಿ ಆಶಿರ್ವಾದ ಪಡೆದೇ ಮುಂದಿನ ಹೆಜ್ಜೆ ಇಟ್ಟಿದ್ರು. ವಿಜಯಲಕ್ಷ್ಮೀ ಮದುವೆಯಾದ ಬಳಿಕವೂ ದರ್ಶನ್ ನಿರಂತರವಾಗಿ ಚಾಮುಂಡಿ ಬೆಟ್ಟಕ್ಕೆ ಬರ್ತಾ ಇದ್ರು. ದೇವಿ ದರ್ಶನ ಪಡೆದು ಹೋಗ್ತಾ ಇದ್ರು. ತಮ್ಮ ಯಾವ ಚಿತ್ರ ಯಶಸ್ಸು ಕಂಡರೂ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸ್ತಾ ಇದ್ರು.
ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಪಾಲಾದ ಹೊತ್ತಲ್ಲಿ ಪತ್ನಿ ವಿಜಯಲಕ್ಷ್ಮೀ ಮೊದಲು ಮೊರೆಹೋಗಿದ್ದೇ ತಾಯಿ ಚಾಮಂಡಮ್ಮನ ಬಳಿ. ಹೌದು ಹಲವು ಶಕ್ತಿಪೀಠಗಳಿಗೆ ಭೇಟಿ ಕೊಟ್ಟು ದರ್ಶನ್ ಗಾಗಿ ಪೂಜೆ ಸಲ್ಲಿಸಿದ್ದ ವಿಜಯಲಕ್ಷ್ಮೀ ಮೊದಲು ಹರಕೆ ಕಟ್ಟಿದ್ದೇ ಚಾಮುಂಡೇಶ್ವರಿ ದೇವಿ ಬಳಿ. ಇನ್ನೂ ದರ್ಶನ್ ಜೈಲಿನಲ್ಲಿದ್ದ ಹೊತ್ತಲ್ಲಿ ತಾಯಿ ಮೀನಮ್ಮ ಕೂಡ ಚಾಮುಂಡಿ ಬೆಟ್ಟಕ್ಕೆ ಬಂದು ಹರಕೆ ಕಟ್ಟಿದ್ರು. ದರ್ಶನ್ ರಿಲೀಸ್ ಆದ ಮೇಲೆ ಹರಕೆ ತಿರಿಸಿ ಹೋದರು. ಒಟ್ಟಾರೆ ದರ್ಶನ್ ಬದುಕಿನ ಹಲವು ಏರು ಪೇರುಗಳಿಗೆ ಬೆಟ್ಟದ ಮಹಿಮೆ ಸಾಕ್ಷಿಯಾಗಿದೆ ಅಂದ್ರೆ ತಪ್ಪಾಗಲ್ಲ. ಸದ್ಯ ಆಷಾಢ ಮಾಸದ ಶುಭ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿ ದರ್ಶನ ಪಡೆದಿದ್ದಾರೆ. ಸದ್ಯ ದರ್ಶನ್ ಮುಂದಿರುವ ಸವಾಲುಗಳು ಗೊತ್ತೇ ಇವೆ. ಸೋ ದರ್ಶನ್ಗೆ ದೇವಿ ವರ ಸಿಗುತ್ತಾ ಕಾದುನೋಡಬೇಕು.