ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

ಅವಮಾನದಿಂದ ಸನ್ಮಾನ... ರಾಕಿ ಯಶೋಗಾಥೆ. ಕೃಷ್ಣಪ್ಪ ನಿರ್ಮಾಣದ ಮೊಗ್ಗಿನ ಮನಸು ಯಶ್ ಮೊದಲ ಚಿತ್ರ. ಟಾಕ್ಸಿಕ್ ಬಗ್ಗೆ ಯಶ್ ಹೇಳಿದ್ದು ಒಂದೇ ಒಂದು ಮಾತು.
 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಕಳೆದ 4 ವರ್ಷಗಳಿಂದ ಯಾವುದೇ ಸಿನಿಮಾದ ಟ್ರೈಲರ್, ಟೀಸರ್ , ಆಡಿಯೋ ಲಾಂಚ್ ಇವೆಂಟ್​ಗಳಿಗೆ ಹೋಗೋದನ್ನ ನಿಲ್ಲಿಸಿಬಿಟ್ಟಿದ್ರು. ಆದ್ರೆ ತಮ್ಮ ಶಪಥ ಮುರಿದು ಮನದ ಕಡಲು ಸಿನಿಮಾ ಟ್ರೈಲರ್ ಲಾಂಚ್​ ಇವೆಂಟ್​ ಅಟೆಂಡ್ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಕೆ ಮೇಲೆ ತಮ್ಮ ಆರಂಭಿಕ ದಿನಗಳು, ಆಗ ಎದುರಿಸಿದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಮೊಗ್ಗಿನ ಮನಸು ನಿಂದ ಯಶ್​ಗೆ ಯಶಸ್ಸು ಸಿಕ್ಯು. ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ರಾಧಿಕಾ ಪಂಡಿತ್ ,, ಯಶ್ ಬಾಳಸಂಗಾತಿ ಕೂಡ ಆದ್ರು. ಅಲ್ಲಿಗೆ ಮೊಗ್ಗಿನ ಮನಸು ಸಿನಿಮಾ ಯಶ್ ಪಾಲಿಗೆ ಬದುಕು ಕೊಟ್ಟ ಸಿನಿಮಾ, ಇಂಥಾ ಸಿನಿಮಾವನ್ನ ತನಗೆ ಕೊಟ್ಟ ನಿರ್ಮಾಪಕರ ಪರ ಈಗ ಯಶ್ ನಿಂತುಕೊಂಡಿದ್ದಾರೆ. ಮನದ ಕಡಲು ಸಿನಿಮಾ ವೇದಿಕೆ ಮೇಲೆ ಯಶ್ ಆದಿನಗಳಲ್ಲಿ ಆದ ಅವಮಾನದ ಕಥೆಯೊಂದನ್ನ ಹೇಳಿಕೊಂಡಿದ್ದಾರೆ. ಅಸಲಿಗೆ ಯಶ್ ಧಾರಾವಾಹಿಯಯಲ್ಲಿ ನಟಿಸ್ತಾ ಇದ್ದ ಹೊತ್ತಲ್ಲಿ ನಿರ್ಮಾಪಕರೊಬ್ಬರು ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಕರೆಸಿದ್ರಂತೆ. ಆದ್ರೆ ಬಂದ ಮೇಲೆ ಫೋಟೋ ಇದ್ರೆ ಕೊಟ್ಟು ಹೋಗಿರು ಅಂದು ಅವಮಾನ ಮಾಡಿದ್ರಂತೆ.

Related Video