James 2022: ರಾಜ್ಯದ ಜನತೆಗೆ ಪುನೀತ್ ರಾಜ್‌ಕುಮಾರ್ ದಿನದ ಸಂಭ್ರಮ!
ರಾಜ್ಯಾದ್ಯಂತ ಗುರುವಾರ ಅಕ್ಷರಶಃ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ, ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್’ ಚಿತ್ರದ ಬಿಡುಗಡೆ ಸಂಭ್ರಮ.
ರಾಜ್ಯಾದ್ಯಂತ ಗುರುವಾರ ಅಕ್ಷರಶಃ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಮಯವಾಗಿತ್ತು. ಒಂದು ಕಡೆ ಮೆಚ್ಚಿನ ನಟನ ಹುಟ್ಟುಹಬ್ಬ (Birthday), ಮತ್ತೊಂದು ಕಡೆ ಬಹುವೆಚ್ಚದ ಅದ್ಧೂರಿ ಚಿತ್ರ ‘ಜೇಮ್ಸ್’ (James) ಚಿತ್ರದ ಬಿಡುಗಡೆ ಸಂಭ್ರಮ. ಎರಡು ಸಂಭ್ರಮಗಳನ್ನು ಹಲವಾರು ಸಂಘಟನೆಗಳು, ಅಭಿಮಾನಿಗಳು (Fans) ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಮರಣೀಯವಾಗಿ ಆಚರಿಸಿದರು. ನಗರದ ಆಟೋ ನಿಲ್ದಾಣ, ಪ್ರಮುಖ ವೃತ್ತ, ಬೀದಿ ಬೀದಿಯಲ್ಲೂ ಅಭಿಮಾನಿಗಳ ಆರಾಧ್ಯದೈವ ಅಪ್ಪು ಅವರ ಭಾವಚಿತ್ರ ಕಟೌಟ್, ಫ್ಲೆಕ್ಸ್ ಹಾಕಿ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಂಭ್ರಮಪಟ್ಟರು.
James 2022: ಅಮೆರಿಕಾದಲ್ಲೂ ಪುನೀತ್ ರಾಜ್‌ಕುಮಾರ್ ಚಿತ್ರದ ದರ್ಬಾರ್
ದೇವಾಲಯದಲ್ಲಿ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಕ್ತದಾನ ಶಿಬಿರ, ಅಂಗಾಗ ದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಹಿ ಹಂಚಿಕೆ, ಅನ್ನದಾನ ಏರ್ಪಡಿಸಲಾಗಿತ್ತು. ಗುರುವಾರ ಮಧ್ಯರಾತ್ರಿ 12 ಆಗುತ್ತಿದ್ದಂತೆ ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿದರು. ಅಪ್ಪು ಭಾವಚಿತ್ರವಿರುವ ಕನ್ನಡ ಧ್ವಜವನ್ನು ಆಟೋ, ಲಾರಿ ಸೇರಿದಂತೆ ಇನ್ನಿತರೆ ವಾಹನಗಳಿಗೆ ಕಟ್ಟಿಕೊಂಡು ಸಂಭ್ರಮಿಸಿದರು. ನಗರದ ವೀರಭದ್ರೇಶ್ವರ ಚಿತ್ರಮಂದಿರದ ಮುಂದೆ ಸುಮಾರು ಒಂದು ಸಾವಿರ ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ಪುನೀತ್ ಹುಟ್ಟುಹಬ್ಬ ಹಾಗೂ 'ಜೇಮ್ಸ್' ಸಂಭ್ರಮವನ್ನು ಅಭಿಮಾನಿಗಳು ಹೇಗೆ ಬರಮಾಡಿಕೊಂಡರು ಎಂಬುದನ್ನು ನೋಡಲು ಈ ವಿಡಿಯೋವನ್ನು ವೀಕ್ಷಿಸಿ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies