James 2022: ಅಮೆರಿಕಾದಲ್ಲೂ ಪುನೀತ್ ರಾಜ್‌ಕುಮಾರ್ ಚಿತ್ರದ ದರ್ಬಾರ್

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್  ಅಭಿನಯದ ಹೈವೋಲ್ಟೇಜ್ 'ಜೇಮ್ಸ್' ಸಿನಿಮಾ ಅಮೆರಿಕಾದಲ್ಲಿ ರಿಲೀಸ್ ಆಗಿ ಜಬರ್ದಸ್ತ್ ಪ್ರದರ್ಶವನ್ನು ಕಾಣುತ್ತಿದೆ.ಚಿಕಾಗೋ ನಗರ ಸೇರಿದಂತೆ ಅಮೆರಿಕಾದ ಹಲವು ರಾಜ್ಯ ಹಾಗು ನಗರಗಳಲ್ಲಿ ಅಪ್ಪು ಹಬ್ಬವನ್ನು ಆಚರಿಸಿದ್ದಾರೆ.

Share this Video
  • FB
  • Linkdin
  • Whatsapp

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar) ಅಭಿನಯದ ಹೈವೋಲ್ಟೇಜ್ 'ಜೇಮ್ಸ್' (James) ಸಿನಿಮಾ ಅಮೆರಿಕಾದಲ್ಲಿ ರಿಲೀಸ್ ಆಗಿ ಜಬರ್ದಸ್ತ್ ಪ್ರದರ್ಶವನ್ನು ಕಾಣುತ್ತಿದೆ. ಚಿಕಾಗೋ ನಗರ ಸೇರಿದಂತೆ ಅಮೆರಿಕಾದ ಹಲವು ರಾಜ್ಯ ಹಾಗು ನಗರಗಳಲ್ಲಿ ಅಪ್ಪು ಹಬ್ಬವನ್ನು ಆಚರಿಸಿದ್ದಾರೆ. ಅಮೆರಿಕಾದಲ್ಲಿ (America) 'ಜೇಮ್ಸ್‌' ಚಿತ್ರಕ್ಕೆ ಭಾರೀ ಬೇಡಿಕೆ ಇದ್ದಿದ್ದರಿಂದ 35 ರಾಜ್ಯಗಳಲ್ಲಿ 150ಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿದೆ. ಸ್ಯಾಂಡಲ್‌ವುಡ್ ಗೆಳೆಯರ ಬಳಗ ಡಿಸ್ಟ್ರಿಬ್ಯೂಷನ್ ಹಕ್ಕು ಪಡೆದಿದ್ದ 'ಜೇಮ್ಸ್' ಸಿನಿಮಾಗೆ ಚಿಕಾಗೋದಲ್ಲಿ ಅತ್ಯತ್ತಮ ಪ್ರತ್ರಿಕ್ರಿಯೆಯನ್ನು ಪಡೆದುಕೊಂಡಿದೆ. 'ಜೇಮ್ಸ್' ಸಿನಿಮಾ ರಿಲೀಸ್ ಹಾಗೂ ಅಪ್ಪು ಹುಟ್ಟುಹಬ್ಬವನ್ನು ಅಲ್ಲಿನ ಕನ್ನಡಿಗರು, ಭಾರತೀಯರು ನಿಜವಾದ ಹಬ್ಬದಂತೆ ಆಚರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video