Asianet Suvarna News Asianet Suvarna News

ಗುರು ಶಿಷ್ಯರು: ಖೋ ಖೋ ಆಟವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ಬಹಿರಂಗಪಡಿಸಿದ ತರುಣ್ ಸುಧೀರ್

ಗುರು ಶಿಷ್ಯರು ಸಿನಿಮಾದ ಬಗ್ಗೆ ತರುಣ್ ಸುಧೀರ್ ಮಾತನಾಡಿ ಶರಣ್ ಕೊಟ್ಟ ಧೈರ್ಯದಿಂದ ಈ ಸಿನಿಮಾ ಮಾಡಿದ್ವಿ. ಲಾಕ್ ಡೌನ್ ಸಮಯದಲ್ಲಿ ಮಾಡಿದ ಕಥೆ ಇದು ಎಂದರು.

Sep 7, 2022, 2:53 PM IST

ಸ್ಯಾಂಡಲ್‌ವುಡ್‌ನಲ್ಲಿ ಈಗ ಗುರುಶಿಷ್ಯರದ್ದೆ ಹವಾ. ಯಾರದು ಅದು ಅಂತೀರಾ ಗುರು ಶಿಷ್ಯರು ಸಿನಿಮಾದ ಬಗ್ಗೆ ಹೇಳುತ್ತಿರುವುದು. ಹೌದು, ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಸೇರಿದಂತೆ ಅನೇಕ ಸ್ಟಾರ್ ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ಈ ಸಿನಿಮಾದ ನಿರ್ಮಾಪಕ ತರುಣ್ ಸುಧೀರ್ ಶರಣ್ ಕೊಟ್ಟ ಧೈರ್ಯದಿಂದ ಈ ಸಿನಿಮಾ ಮಾಡಿದ್ವಿ. ಲಾಕ್ ಡೌನ್ ಸಮಯದಲ್ಲಿ ಮಾಡಿದ ಕಥೆ ಇದು. ಖೋ ಖೋ ದೇಸಿ ಕ್ರೀಡೆ. ಶಾಲೆಯಲ್ಲಿ ಖೋ ಖೋ ಆಡಿದ್ದಕ್ಕೆ ಇಷ್ಟು ಫಿಟ್ ಆಗಿದ್ದೀವಿ ಅಂತ ಅನೇಕ ಸ್ಟಾರ್ ಆಟಗಾರರು ಹೇಳಿಕೆ ಕೊಟ್ಟಿದ್ದಾರೆ.