ತೆಲುಗು ಕಾಮಿಡಿ ಸ್ಟಾರ್ ಬ್ರಹ್ಮಾನಂದಂ ಚಿಕ್ಕಬಳ್ಳಾಪುರದಲ್ಲಿ ಪ್ರಚಾರ !
ಚಿಕ್ಕಬಳ್ಳಾಪುರದಲ್ಲಿ ತೆಲುಗು ಕಾಮಿಡಿ ನಟ ಬ್ರಹ್ಮಾನಂದಂ !
ಡಾ. ಸುಧಾಕರ್ ಪರ ಬ್ರಹ್ಮಾನಂದಂ ಭರ್ಜರಿ ಪ್ರಚಾರ !
ಬ್ರಹ್ಮಾನಂದಂಗಾಗಿ ಮುಗಿ ಬಿದ್ದ ಚಿಕ್ಕಬಳ್ಳಾಪುರ ಮಂದಿ!
ಚಿಕ್ಕಬಳ್ಳಾಪುರ: ಕರ್ನಾಟಕ ರಾಜಕೀಯಕ್ಕೂ ತೆಲುಗು ಸ್ಟಾರ್ ನಟರಿಗೂ ಎಂತ್ತಿದ್ದೆತ್ತ ಸಂಬಂಧ ? ಯೆಸ್, ಸಂಬಂಧ ಇದೆ. ಅದು ಎಲೆಕ್ಷನ್ ಬಂದಾಗ ಮಾತ್ರ. ಹೀಗಾಗೆ ತೆಲುಗು ಸ್ಟಾರ್ ಕಾಮಿಡಿಯನ್ ಬ್ರಹ್ಮಾನಂದಂ ಚಿಕ್ಕಬಳ್ಳಾಪುರದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಲ್ಲದೇ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಮತಬೇಟೆ ಮಾಡಿದ್ದಾರೆ. ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಭಾಷೆಯನ್ನಾಡುವ ಜನರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಟ ಬ್ರಹ್ಮಾನಂದಂ ಚಿಕ್ಕಬಳ್ಳಾಪುರದಾದ್ಯಂತ ಪ್ರಚಾರ ಮಾಡಿದ್ದಾರೆ. ಅಪರೂಪದ ಅತಿಥಿಯಂತೆ ಬಂದ ಬ್ರಹ್ಮಾನಂದಂರನ್ನ ನೋಡಿ ಚಿಕ್ಕಬಳ್ಳಾಪುರ ಮಂದಿ ಸಖತ್ ಖುಷ್ ಹುವಾ ಎಂದಿದ್ದಾರೆ.