Kichcha Sudeep: ವಿಕ್ರಾಂತ್ ರೋಣ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡೈಲಾಗ್.!

ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಟೀಸರ್ ಮೊನ್ನೆಯಷ್ಟೆ ಹೊರ ಬಂದು ವರ್ಲ್ಡ್ ವೈಡ್ ಫೇಮಸ್ ಆಗಿದೆ. ಇದೀಗ ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ಬಾಲನಟನಾಗಿ ನಟಿಸಿದ್ದ ಸಿನಿಮಾದ ಡೈಲಾಗ್ ಒಂದು ಟ್ರೆಂಡ್ ಆಗ್ತಿದೆ. 

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ (Kiccha Sudeep) ನಟನೆಯ 'ವಿಕ್ರಾಂತ್ ರೋಣ' (Vikrant Rona) ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಟೀಸರ್ ಮೊನ್ನೆಯಷ್ಟೆ ಹೊರ ಬಂದು ವರ್ಲ್ಡ್ ವೈಡ್ ಫೇಮಸ್ ಆಗಿದೆ. ಇದೀಗ ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ (Puneeth Rajkumar) ಬಾಲನಟನಾಗಿ ನಟಿಸಿದ್ದ ಸಿನಿಮಾದ ಡೈಲಾಗ್ ಒಂದು ಟ್ರೆಂಡ್ ಆಗ್ತಿದೆ. 'ವಿಕ್ರಾಂತ್ ರೋಣ' ಟೀಸರ್‌ನಲ್ಲಿ 'ಪಟ್ಟೆ ಪಟ್ಟೆ ಹುಲಿ' ಅನ್ನೋ ಡೈಲಾಗ್ ಅನ್ನ ಮಕ್ಕಳು ಹೇಳ್ತಾರೆ. ಅದೇ ಡೈಲಾಗ್ ಅನ್ನ ಅಣ್ಣಾವ್ರ 'ಪರಶುರಾಮ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹೇಳ್ತಾರೆ. ಅಪ್ಪು ಹೇಳೋ ಡೈಲಾಗ್ ಅನ್ನೇ ಸ್ಪೂರ್ತಿ ಪಡೆದು ನಿರ್ದೇಶಕ ಅನೂಪ್ ಭಂಡಾರಿ (Anup Bhandari) 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಅದೇ ತರ ತರದ ಡೈಲಾಗ್ ಅನ್ನ ಪೋಣಿಸಿದ್ದಾರೆ.

ಗೆಳೆಯನ ಬ್ಲಾಕ್ ಬಸ್ಟರ್ ಮೂವಿ ಬರ್ತಿದೆ ಸಿದ್ಧರಾಗಿ ಎಂದ ಸಿಡಿಲ ಮರಿ ಸೆಹ್ವಾಗ್..!

ಹೊರಬರ ಬೆನ್ನು ತಟ್ಟಿದ ಕಿಚ್ಚ..!: ಹೊಸಬರ ಪ್ರಯತ್ನಗಳಿಗೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಡಿಗೇರ್ ದೇವೇಂದ್ರ ನಿರ್ದೇಶನದ ಹೊಸಬರ ತಂಡ ನಿರ್ಮಿಸಿರುವ ಪ್ರಯೋಗಾತ್ಮಕ ಸಿನಿಮಾ 'ಇನ್' ಚಿತ್ರದ ಟೀಸರನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರದ ಟೀಸರ್ ವೀಕ್ಷಿಸಿ ಬಿಡುಗಡೆ ಮಾಡಿರುವ ನಟ ಸುದೀಪ್ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಚಿತ್ರದದಲ್ಲಿ ನಾಯಕಿಯಾಗಿ ಪಾವನಾ ನಟಿಸಿದ್ದು, ಪ್ರಶಾಂತ ಅಯ್ಯಗಾರಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಭರತ್ ನಾಯಕ್ ಸಂಗೀತ ನೀಡಿದ್ದು, ಸಾಹಿತ್ಯ ಬಡಿಗೇರ್ ದೇವೇಂದ್ರ, ಶಂಕರ ಪಾಗೋಜಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video