Tanisha Kuppanda: ಬಿಗ್ ಬಾಸ್‌ನಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡ ತನಿಷಾ: ಐಟಂ ಸಾಂಗ್, ಸ್ಪೆಷಲ್ ಸಾಂಗ್‌ಗೆ ಡಿಮ್ಯಾಂಡ್ !
ಬಿಗ್ ಬಾಸ್‌ನಿಂದಾಗಿ ಸ್ಪೆಷಲ್ ಸಾಂಗ್‌ಗೆ ಕುಣಿಯಲು ಹೆಚ್ಚು ಬೇಡಿಕೆ ಬರುತ್ತಿದೆ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.
ಬಿಗ್ ಬಾಸ್‌ನಿಂದಾಗಿ(Big Boss) ತನಿಷಾಗೆ(Tanisha Kuppanda) ಸಿನಿಮಾಗಳಿಂದಲೂ ಅವಕಾಶ ಬರ್ತಿದೆಯಂತೆ. ಅದರಲ್ಲೂ ಸ್ಪೆಷಲ್ ಹಾಡಿಗೆ ಹೆಜ್ಜೆ(Dance) ಹಾಕಲು ಹಲವಾರ ಅವಕಾಶಗಳು ಬಂದಿವೆಯಂತೆ. ಇತ್ತೀಚೆಗೆ ಅವರು ಜ್ಯೂವೆಲ್ಲರಿ ಶಾಪ್‌ನನ್ನು ಉದ್ಘಾಟನೆ ಮಾಡಿದ್ದಾರೆ. ಹಾಗಾಗಿ ವ್ಯವಹಾರದಲ್ಲಿ ತೊಡಗಿದ್ದರಿಂದ ಈ ಅವಕಾಶಗಳಿಗೆ ಓಕೆ ಎನ್ನಲು ಆಗುತ್ತಿಲ್ಲವಂತೆ. ಈ ನಡುವೆ ಶೇರ್ ಹೆಸರಿನ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಕಾಕಿ ತೊಟ್ಟು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.ಕನ್ನಡತಿ ಹೀರೋ ಕಿರಣ್ ರಾಜ್ (Kiran Raj) ನಟನೆಯ ‘ಶೇರ್’ (Sherr) ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಮಾರಿದ ವಿಜಯ್ ದೇವರಕೊಂಡ..! ಅದು ಬರೀ 25 ಲಕ್ಷಕ್ಕೆ ಮಾರಾಟ..!