ಶಿವಣ್ಣನಿಗೆ ಹೆಚ್ಚಿದ ತಮಿಳು ಫ್ಯಾನ್ಸ್: ಘೋಸ್ಟ್ ಹಿಟ್, ಲಿಯೋ ಫಟ್ ಎಂದಿದ್ದು ಯಾಕೆ?
ತಮಿಳು ಅಭಿಮಾನಿಗಳು ನಟ ವಿಜಯ್ ಸಿನಿಮಾ ಲಿಯೋ ರಿಪ್ ಎಂದು ಪೋಸ್ಟ್ ಹಾಕುತ್ತಿದ್ದಾರೆ.
ತಮಿಳು ಹೀರೋ ಸಿನಿಮಾ ಫಟ್ ಆಗಲಿ, ನಟ ಶಿವರಾಜ್ ಕುಮಾರ್(Shiva Rajkumar) ಚಿತ್ರ ಹಿಟ್ ಆಗಲಿ ಎಂದು ತಮಿಳು ಫ್ಯಾನ್ಸ್(Tamil Fans) ಟ್ರೆಂಡ್ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಘೋಸ್ಟ್ ಸಿನಿಮಾಗೂ(Ghost Movie) ತಮಿಳು ನಟ ವಿಜಯ್ ಸಿನಿಮಾಗೂ ಏನು ಸಂಬಂಧ ಗೊತ್ತಿಲ್ಲ. ಆದ್ರೆ ತಮಿಳು ಫ್ಯಾನ್ಸ್ ವಿಜಯ್ ಸಿನಿಮಾಗೆ ರಿಪ್ ಎಂದು ಪೋಸ್ಟ್ ಹಾಕಿದ್ದಾರೆ. ಅಲ್ಲದೇ ನಾವು ಅ.18 ವರೆಗೂ ಘೋಸ್ಟ್‌ಗಾಗಿ ಕಾಯಲು ಆಗುವುದಿಲ್ಲ ಎಂದು ಫೋಸ್ಟ್ ಹಾಕಿದ್ದಾರೆ. ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸಿದ ಬಳಿಕ ಅವರಿಗೆ ತಮಿಳ್ ಫ್ಯಾನ್ಸ್ ಹೆಚ್ಚಾಗಿದ್ದಾರಂತೆ. ಹಾಗಾಗಿ ತಮಿಳು ಫ್ಯಾನ್ಸ್ ಶಿವರಾಜ್ ಕುಮಾರ್ ಘೋಸ್ಟ್ ಸಿನಿಮಾ ನೋಡಲು ಕಾಯುತ್ತಿದ್ದಾರಂತೆ. ಈ ಹಿನ್ನೆಲೆ ವಿಜಯ್ ಲಿಯೋ ಸಿನಿಮಾ ಘೋಸ್ಟ್ ಮುಂದೆ ಸತ್ತಂತೆ ಎಂದು ಹೇಳುವ ಮೂಲಕ ಪೋಸ್ಟ್ ಹಾಕುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್ ತೆರೆ ಮೇಲೆ 'ಕ್ಷೇತ್ರಪತಿ' ದರ್ಬಾರ್: ಇನ್ಮುಂದೆ ಕನ್ನಡದ ಬಾಕ್ಸಾಫೀಸ್‌ಗೆ ಇವನೇ ಅಧಿಪತಿ..!