ಸ್ಯಾಂಡಲ್‌ವುಡ್ ತೆರೆ ಮೇಲೆ 'ಕ್ಷೇತ್ರಪತಿ' ದರ್ಬಾರ್‌: ಇನ್ಮುಂದೆ ಕನ್ನಡದ ಬಾಕ್ಸಾಫೀಸ್‌ಗೆ ಇವನೇ ಅಧಿಪತಿ..!

ಪ್ರೇಕ್ಷಕರ ಮನ ಗೆದ್ದ ಜವಾರಿ ಶೈಲಿಯ 'ಕ್ಷೇತ್ರಪತಿ' 
ರಾಜ್ಯಾದ್ಯಂತ 'ಕ್ಷೇತ್ರಪತಿ' ದರ್ಬಾರ್ ಆರಂಭ..!
ರೈತ ಹೋರಾಟದ ಕತೆಗೆ ಜೀವ ತುಂಬಿದ ನವೀನ್!

Share this Video
  • FB
  • Linkdin
  • Whatsapp

ನಮ್ಮ ಎಫರ್ಟ್ ಸರಿಯಾಗಿದ್ರೆ ಸಕ್ಸಸ್ ಕಂಡಿತಾ ನಮ್ಮದೇ. ಈಗ ಅಂತಹ ಸಕ್ಸಸ್ ಹಾದಿ ಹಿಡಿದು ಹೊರಟಿದ್ದಾನೆ ಈ ಕ್ರೇತ್ರಪತಿ(Kshetrapati). ಸ್ಯಾಂಡಲ್‌ವುಡ್‌ನಲ್ಲಿ(sandalwood) ಗುಲ್ಟು ನವೀನ್ ಅಂತಲೇ ಖ್ಯಾತಿಗಳಿಸಿದ್ದ ನವೀನ್ ಶಂಕರ್(Naveen shankar) ನಟನೆಯ ಕ್ಷೇತ್ರಪತಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಈ ಕ್ರೇತ್ರಪತಿಗೆ ಪ್ರೇಕ್ಷಕ ಪ್ರಭುಗಳು ಮಾರು ಹೋಗಿದ್ದಾರೆ. ಕ್ರೇತ್ರಪತಿ ಪ್ರತಿಭಾನ್ವಿತ ನಟ ನವೀನ್ ಶಂಕರ್ ನಾಯಕನಾಗಿ ನಟಿಸಿರೋ ಸಿನಿಮಾ. ನವೀನ್ ಶಂಕರ್‌ಗೆ ಗುಲ್ಟು ಸಿನಿಮಾದ ಕ್ಯಾರೆಕ್ಟರ್ ದೊಡ್ಡ ಹೆಸರು ತಂದುಕೊಡ್ತು. ಗುರುದೇವ ಹೊಯ್ಸಳ ಸಿನಿಮಾದಲ್ಲಿ ಡಾಲಿ ಎದುರು ಬಲಿ ಅನ್ನೋ ರೋಲ್ ಮಾಡಿ ಮತ್ತೆ ವಿಜೃಂಬಿಸಿದ್ರು. ಆದ್ರೆ ಈಗ ಕ್ರೇತ್ರಪತಿ ಸಿನಿಮಾದಲ್ಲಿ ಪಕ್ಕಾ ಕ್ರಾಂತಿಕಾರಿಯಾಗಿ ಘರ್ಜಿಸುತ್ತಿದ್ದಾರೆ. ಉತ್ತರ ಕರ್ನಾಟಕ ರೈತರ ಬದುಕು, ಅನ್ನದಾತನ ಸಮಸ್ಯೆಗಳು, ಹೋರಾಟದ ಕತೆಯನ್ನ ಪವರ್‌ಫುಲ್ ಆಗಿ ತೆರೆ ಮೇಲೆ ತರಲಾಗಿದೆ. ನವೀನ್ ಶಂಕರ್, ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೊತ್ತ ಸಿನಿಮಾ ಬಂದಿದೆ. ಶ್ರೀಕಾಂತ್ ಕಟಗಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ಹೀರೋ ನವೀನ್ ಶಂಕರ್ ರೈತನ ಮಗನಾಗಿದ್ದು, ಇಂಜಿನಿಯರಿಂಗ್ ಓದುತ್ತಿರುತ್ತಾನೆ. ವಿದೇಶದಲ್ಲಿ ಕೆಲಸ ಮಾಡೋ ಕನಸು ಕಾಣುವ ನಾಯಕ ರೈತನಾಗಿ ಬದಲಾಗುತ್ತಾನೆ. ರೈತರ ಪರ ಹೋರಾಟಕ್ಕೆ ಇಳಿಯುತ್ತಾನೆ. ಅದು ಯಾಕೆ ಅನ್ನೋದೆ ಈ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಆಗಿ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ: ಕಡಲ ತಡಿಯಲ್ಲಿ ಪ್ರೀತಿಯ ಅಮಲಿನಲ್ಲಿ ರಕ್ಷಿತ್-ರುಕ್ಮಿಣಿ: ಹೇಗಿರುತ್ತೆ ಸಪ್ತ ಸಾಗರದಾಚೆ ಎಲ್ಲೋ ಪ್ರಪಂಚ..?

Related Video