'ಟಗರು ಪಲ್ಯ' ನೋಡಿ ಖುಷಿ ಪಟ್ಟ ಸ್ಯಾಂಡಲ್‌ವುಡ್‌ ಮಂದಿ: ಸಿನಿಮಾಗೆ ತಾರೆಯರ ರಿವ್ಯೂ ಹೇಗಿದೆ ಗೊತ್ತಾ ?

ಟಗರು ಪಲ್ಯ ಸೆಲೆಬ್ರೆಟಿ ಶೋನಲ್ಲಿ ಸ್ಯಾಂಡಲ್‌ವುಡ್‌ ತಾರೆಯರು ಮಿಂದೆದಿದ್ದಾರೆ. ಡಾಲಿ ಧನಂಜಯ್ 'ಟಗರು ಪಲ್ಯ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
 

First Published Oct 28, 2023, 9:10 AM IST | Last Updated Oct 28, 2023, 9:10 AM IST

ಟಗರು ಪಲ್ಯ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಓಪನಿಂಗ್​ ಪಡೆದುಕೊಂಡಿದೆ. ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಬಂದಿದ್ದು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುತ್ರಿ ಅಮೃತಾ ಪ್ರೇಮ್‌ರನ್ನು(Amrutha Prem) ನಟ ಲವ್ಲಿ ಸ್ಟಾರ್​ ಪ್ರೇಮ್​ ತಬ್ಬಿ ಕಣ್ಣೀರಿಟ್ಟಿದ್ದಾರೆ. 175 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ(Dolly Pictures Banner) ಮೂಡಿಬಂದ ಮೂರನೇ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ಹಲವಾರು ನಟ-ನಟಿಯರು ನೋಡಿ, ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸಿನಿ ಪ್ರೇಕ್ಷಕರು ರುಚಿ ರುಚಿಯಾದ ಟಗರು ಪುಲ್ಯ(Tagaru palya) ತಿಂದು ತೇಗಿದ್ದಾರೆ. ಅಪ್ಪಟ ಹಳ್ಳಿ ಸೊಗಡು, ಸೊಬಗು. ಹೊಟ್ಟೆ ಹುಣ್ಣಾಗುವಷ್ಟು ಕಾಮಿಡಿ. ಅಲ್ಲಲ್ಲಿ ಕಣ್ಣೀರು ತರಿಸೋ ಎಮೋಷನಲ್ ದೃಶ್ಯಗಳ ಹಾವಳಿ ಸಿನಿಮಾದಲ್ಲಿದೆ. 

ಇದನ್ನೂ ವೀಕ್ಷಿಸಿ:  ಡಾಲಿಯ 'ಟಗರು ಪಲ್ಯ' ರುಚಿ ಸವಿದ ಪ್ರೇಕ್ಷಕ: ಇಲ್ಲಿದೆ ನೋಡಿ ಸಿನಿಮಾ ರುಚಿಯಾದ ರಿವ್ಯೂ..!