Asianet Suvarna News Asianet Suvarna News

ಹೇಗಿತ್ತು ಗೊತ್ತಾ ದರ್ಶನ್-ಸುದೀಪ್ ಗೆಳೆತನ?: ಕಿಚ್ಚನ ಅದೊಂದು ಮಾತು.. ಬೇರೆ ಕತೆ ಹೇಳಿತ್ತು!

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಚಕ್ರವರ್ತಿ ಅಂತ ಅಭಿಮಾನಿಗಳಿಂದ ಬಿರುದು ಪಡೆದಿದ್ದಾರೆ, ಕಿಚ್ಚ ಸುದೀಪ್.. ಆ ಆರಡಿ ಕಟೌಟ್ ಹಿಂದೆ, ಲಕ್ಷಾಂತರ ಅಭಿಮಾನಿಗಳಿದಾರೆ.. ಆ ಅಭಿಮಾನಿಗಳ ಬಗ್ಗೆ ಸುದೀಪ್ ಹೆಮ್ಮೆಯ ಮಾತುಗಳನ್ನಾಡಿದ್ರು.

First Published Sep 3, 2024, 11:24 AM IST | Last Updated Sep 3, 2024, 11:24 AM IST

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಚಕ್ರವರ್ತಿ ಅಂತ ಅಭಿಮಾನಿಗಳಿಂದ ಬಿರುದು ಪಡೆದಿದ್ದಾರೆ, ಕಿಚ್ಚ ಸುದೀಪ್.. ಆ ಆರಡಿ ಕಟೌಟ್ ಹಿಂದೆ, ಲಕ್ಷಾಂತರ ಅಭಿಮಾನಿಗಳಿದಾರೆ.. ಆ ಅಭಿಮಾನಿಗಳ ಬಗ್ಗೆ ಸುದೀಪ್ ಹೆಮ್ಮೆಯ ಮಾತುಗಳನ್ನಾಡಿದ್ರು. ಆದ್ರೆ, ಕಿಚ್ಚ ತಮ್ಮ ಅಭಿಮಾನಿಗಳ ಬಗ್ಗೆ ಒಂದೊಂದು ಮಾತು ಆಡುವಾಗ್ಲೂ, ಇನ್ನೊಬ್ಬ ಆರಡಿ ನಟನ ಫ್ಯಾನ್ಸ್ ನೆನಪಾಗ್ತಾ ಇದ್ರು. ಆ ನಟ ಯಾರು ಗೊತ್ತಲ್ವಾ? ಮರ್ಡರ್ ಕೇಸಲ್ಲಿ ಅಂದರ್ ಆಗಿರೋ, ದರ್ಶನ್..  ಅಂದ್ ಹಾಗೆ ಸುದೀಪ್ ಫ್ಯಾನ್ಸ್ಗೂ, ದರ್ಶನ್ ಫ್ಯಾನ್ಸ್ಗೂ ಹೋಲಿಕೆ ಮಾಡ್ತಾ ಇರೋದ್ಯಾರು? ಅದಕ್ಕೆ ಕಾರಣ ಏನು? ಇಲ್ಲಿದೆ ನೋಡಿ.

ಅಸಲಿ ಕತೆ. ದರ್ಶನ್   ಫ್ಯಾನ್ಸುಗಳ ಹುಚ್ಚಾಟಕ್ಕೆ ದರ್ಶನ್ ಸಂಕಷ್ಟಗಳ ಮಧ್ಯೆ ಸಿಲುಕೋ ಹಾಗಾಯ್ತು..  ಆದ್ರೆ ದರ್ಶನ್ ಫ್ಯಾನ್ಸುಗಳೂ ಕೂಡ ಅವರ ಹುಚ್ಚಾಟದಿಂದ ಅವರೇ ಪೇಚಾಡೋ ಸ್ಥಿತಿ ನಿರ್ಮಾಣವಾಗಿದೆ. ಸುದೀಪ್ ಅವರು ಮಾತಾಡಿದ್ದು ತಮ್ಮ ಅಭಿಮಾನಿಗಳ ಬಗ್ಗೆ.. ಆದ್ರೆ ಜನ ಕಂಪೇರ್ ಮಾಡಿದ್ದು, ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ಗಳನ್ನ.. ಇದರ ಹಿಂದೆ ಒಂದು ಲಾಜಿಕ್ ಇದೆ.. ಅದೇನು ಅಂದ್ರೆ, ದರ್ಶನ್ ಹಾಗೂ ಸುದೀಪ್ ಒಂದು ಕಾಲದ ಕುಚಿಕು ಗೆಳಯರು. ಈ  ಪ್ರಶ್ನೆಗೆ ಒಂದು ಕೌತುಕಮಯ ಉತ್ತರ ಇದೆ.. ಬರೀ ಫ್ಯಾನ್ಸುಗಳನ್ನ ಮಾತ್ರವೇ ಅಲ್ಲ, ದರ್ಶನ್ ಸುದೀಪ್ ವಿಚಾರದಲ್ಲಿ ಪ್ರತಿಯೊಂದನ್ನೂ ಅಳೆದು ತೂಗೋ ಅಭ್ಯಾಸ ಕೆಲವರಿಗಿದೆ.

ಅದಕ್ಕೆ ಹಲವಾರು ಕಾರಣಗಳಿದಾವೆ. ಆದ್ರೆ, ದರ್ಶನ್ ಫ್ಯಾನ್ಸ್ ಮಾಡಿದ ಎಡವಟ್ಟು ಏನೇನು ಆಪತ್ತು ತಂದಿಟ್ಟಿತು. ದರ್ಶನ್ ತನ್ನ ಅಭಿಮಾನಿಗಳನ್ನ ಅಭಿಮಾನಿಗಳು ಅಂತ ಕರೀತಿರ್ಲಿಲ್ಲ.. ಅವರಿಗೆ ಸೆಲೆಬ್ರಿಟಿ ಅಂತ  ಪಟ್ಟಕಟ್ಟಿದ್ದ.. ಆದ್ರೆ ಆ ಅಭಿಮಾನಿಗಳನ್ನೇ ಆಯುಧ ಮಾಡ್ಕೊಂಡು ದರ್ಶನ್ ಏನು ಮಾಡಲು ಹೊರಟಿದ್ದ ಅನ್ನೋದು ನಿಮಗೇ  ಗೊತ್ತಿದೆ.. ಆದ್ರೆ ಈ ದರ್ಶನ್ ಫ್ಯಾನ್ಸ್ ಏನು ಕಮ್ಮಿನಾ..? ಒಟ್ಟಾರೆ, ಫ್ಯಾನ್ ಒಬ್ಬರ ಹುಚ್ಚಾಟದಿಂದ, ನಿಜಕ್ಕೂ ಕಷ್ಟ ಅನುಭವಿಸ್ತಾ ಇರೋ ನಟ ಅಂದ್ರೆ ದರ್ಶನ್ ಮಾತ್ರ ಅನ್ಸತ್ತೆ… ಈಗಲಾದ್ರೂ ಪರಿಸ್ಥಿರಿ ಅರ್ಥ ಮಾಡ್ಕೊಳ್ತಾರಾ ಆ ಅಭಿಮಾನಿಗಳು? ಕಾಲವೇ ಉತ್ತರ ಕೊಡ್ಬೇಕು.

Video Top Stories