ದೀಪಾವಳಿಗೆ ಬಂದ್ರೂ ಪಟಾಕಿ ಹಚ್ಚಂಗಿಲ್ಲ... ಶೂಟಿಂಗ್​ ಮಾಡಂಗಿಲ್ಲ ನಟ ದರ್ಶನ್!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್​ ಆಗಿದ್ದ ನಟ ದರ್ಶನ್​ ಕೊನೆಗೂ ಹೊರ ಬಂದಿದ್ದಾರೆ. 5 ತಿಂಗಳ ಸೆರೆಮನೆವಾಸದ ನಂತರ ದೀಪಾವಳಿ ಹಬ್ಬಕ್ಕೆ ಮನೆಗೆ ಬರ್ತಿದ್ದಾರೆ. ಆದ್ರೆ ದೀಪಾವಳಿ ಹಬ್ಬಕ್ಕೆ ಹೊರ ಬಂದ್ರೂ ಪಟಾಕಿ ಹಚ್ಚಂಗಿಲ್ಲ

First Published Oct 31, 2024, 12:39 PM IST | Last Updated Oct 31, 2024, 12:39 PM IST

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್​ ಆಗಿದ್ದ ನಟ ದರ್ಶನ್​ ಕೊನೆಗೂ ಹೊರ ಬಂದಿದ್ದಾರೆ. 5 ತಿಂಗಳ ಸೆರೆಮನೆವಾಸದ ನಂತರ ದೀಪಾವಳಿ ಹಬ್ಬಕ್ಕೆ ಮನೆಗೆ ಬರ್ತಿದ್ದಾರೆ. ಆದ್ರೆ ದೀಪಾವಳಿ ಹಬ್ಬಕ್ಕೆ ಹೊರ ಬಂದ್ರೂ ಪಟಾಕಿ ಹಚ್ಚಂಗಿಲ್ಲ.. ಬೆಂಗಳೂರು ಬಿಟ್ಟು ಹೋಗಂಗಿಲ್ಲ.. ಹೀಗೆ ಹತ್ತಾರು ಷರತ್ತುಗಳನ್ನ ಹಾಕೇ ಕೋರ್ಟ್​ ದರ್ಶನ್​ಗೆ ಜಾಮೀನು ನೀಡಿದೆ.. ಹಾಗಾದ್ರೆ ದರ್ಶನ್​​ಗೆ ವಿಧಿಸಿರುವ ಷರತ್ತುಗಳೇನು..? ಮುಂದಿನ 6 ವಾರಗಳ ಕಾಲ ದರ್ಶನ್​​​ ಏನೇನು ಮಾಡ್ತಾರೆ..? ಇವತ್ತು ಬಳ್ಳಾರಿ ಜೈಲಿನಲ್ಲಿ ಏನೇನಾಯ್ತು..? ಹೀಗೆ ದರ್ಶನ್​​ 5 ತಿಂಗಳ ಜೈಲುವಾಸ ಮುಗಿಸಿ ಹೊರಬಂದ್ರು.. ಆದ್ರೆ ದರ್ಶನ್​ಗೆ ಜಾಮೀನು ಸಿಗ್ತಿದ್ದಂತೆ ಅವರ ಅಭಿಮಾನಿಗಳೆಲ್ಲಾ ಜೈಲೆದುರು ಜಮಾವಣೆಗೊಂಡ್ರು.. ದರ್ಶನ್​ ಕಾರ್​ ಹತ್ತಿ ಹೋಗುವವರೆಗೂ ಜೈಕಾರ ಹಾಕಿದ್ರು.. ಹಾಗಾದ್ರೆ ಬಳ್ಳಾರಿ ಜೈಲಿನ ಮುಂಭಾಗ ಇವತ್ತು ಹೇಗಿತ್ತು ವಾತವರಣ..? ಗಂಡನಿಗೆ ಬೇಲ್​ ಸಿಗ್ತಿದ್ದಂತೆ ವಿಜಯಲಕ್ಷ್ಮಿಯ ನೊದಲ ಮಾತು ಏನಾಗಿತ್ತು.? 

ದರ್ಶನ್​​​ಗೆ ಮಧ್ಯಂತರ ಜಾಮೀನು ಸಿಕ್ಕಿದಕ್ಕೆ ಯಾರಿಗೆ ಎಷ್ಟು ಖುಷಿ ಆಯ್ತೋ ಏನೋ ಆದ್ರೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅಂತೂ ಜಗತ್ತನ್ನೇ ಗೆದ್ದಷ್ಟು ಖುಷಿಯಲ್ಲಿದ್ರು.. ತೀರ್ಪು ಬರ್ತಿದ್ದಂತೆ ಸೀದಾ ದುರ್ಗ ದೇವಿಯ ದರ್ಶನ ಪಡೆದು ಧನ್ಯವಾದ ತಿಳಿಸಿದ್ರು.. ಇನ್ನೂ ದರ್ಶನ್​ ಅಭಿಮಾನಿಗಳಂತೂ ನಮ್ಮ ಬಾಸ್​​​ ಹೊರಗೆ ಬರುತ್ತಿರೋದೇ ಹಬ್ಬ ಅಂತ ಜೈಲಿನ ಎದುರೇ ಸಂಭ್ರಮಾಚರಣೆ ಮಾಡಿದ್ರು. ಆದ್ರೆ ಕೊಲೆಯಾದ ರೇಣುಕಾಸ್ವಾಮಿಯ ಕುಟುಂಬದ ಇವತ್ತಿನ ಕಥೆ ಕೇಳಿದ್ರೆ ನಿಜಕ್ಕೂ ಕಣ್ಣುಗಳು ಒದ್ದೆಯಾಗಿ ಬಿಡ್ತಾವೆ. ಸದ್ಯಕ್ಕೆ ದರ್ಶನ್​ಗೆ ತಾತ್ಕಾಲಿಕ ರಿಲೀಫ್​​ ಸಿಕ್ಕಿದೆ.. 6 ವಾರ ಏನೇನು ಚಿಕಿತ್ಸೆ ಪಡೆಯಬೇಕು ಪಡೆದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.. ಆದ್ರೆ ಈ ಆರು ವಾರದ ದರ್ಶನ್​ ಆಟ ಹೇಗಿರಲಿದೆ ಎಂಬುದೇ ಈಗಿರುವ ಕುತೂಹಲ.

Video Top Stories