ಸಕ್ಕರೆ ನಾಡಿನಲ್ಲಿ ಅಕ್ಕರೆಯ ಅಭಿ-ಅವಿವಾ ಬೀಗರೂಟ: ಇಂದು ಅಂಬಿ ಫ್ಯಾನ್ಸ್‌ಗೆ ಭರ್ಜರಿ ಬಾಡೂಟ!

ಮಂಡ್ಯ ಜನರಿಗಾಗಿ ಸುಮಲತಾ ಅಂಬರೀಶ್‌ ಮತ್ತು ಅಭಿಷೇಕ್ ಅಂಬರೀಶ್‌ ಜಿಲ್ಲೆಯಲ್ಲಿ ಬೀಗರೂಟವನ್ನು ಏರ್ಪಡಿಸಿದ್ದಾರೆ.

First Published Jun 16, 2023, 9:08 AM IST | Last Updated Jun 16, 2023, 9:08 AM IST

ರೆಬೆಲ್ ಸ್ಟಾರ್ ಮಂಡ್ಯದ ಗಂಡು ಅಂಬರೀಷ್ ಅವರ ಪುತ್ರ ಅಭಿಷೇಕ್ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಅಭಿಷೇಕ್ ಅವಿವಾ ಬಿದ್ದಪ್ಪ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಂಡ್ಯದ ಗಜ್ಜಲೆಗೆರೆಯಲ್ಲಿ 16ನೇ ತಾರೀಖು ಬಾರೀ ಬೀಗರೂಟ ಏರ್ಪಡಿಸಲಾಗಿದೆ. 50 ಸಾವಿರದಿಂದ 70 ಸಾವಿರ ಅಭಿಮಾನಿಗಳು ಬರುವ ನಿರೀಕ್ಷೆಯಿದೆ. ಸು.14000 ಕೆಜಿ ಚಿಕನ್ ಮಟನ್‌ನಲ್ಲಿ ವಿವಿಧ ಮಾಂಸಾಹಾರ ಖ್ಯಾದ್ಯಗಳನ್ನು ಮಾಡಿ ಬಡಿಸಲಾಗುತ್ತದೆ.ಇನ್ನು ನಟಿ ಸಂಸದೆ ಸುಮಲತಾ ಅಂಬರೀಶ್ , ಅಂಭಿ ಕನಸಿನಂತೆ ಮಗನ ಮದುವೆ ಮಾಡಿದ್ದು, ಇದೀಗ ಸ್ವತಃ ಸುಮಲತಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯಾ ಜನತೆಗೆ ಬೀಗರೂಟಕ್ಕೆ ಆಹ್ವಾನವಿತ್ತಿದ್ದಾರೆ.ಅಭಿಷೇಕ್ ಹಾಗೂ ಅವಿವಾ ಮದುವೆಯ ಸಂಭ್ರಮವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇದೇ ಶುಕ್ರವಾರ ದಿನಾಂಕ 16/06/2023 ರಂದು ಬೆಳಗ್ಗೆ 11.30 ರಿಂದ ಬೀಗರ ಔತಣವನ್ನು ಏರ್ಪಡಿಸಲಾಗಿದೆ.ಇದಕ್ಕಾಗಿ ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸುಮಲತಾ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Today Rashibhavishy: ಇಂದಿನ ದಿನ ಭವಿಷ್ಯ: ಈ ದಿನ ಶಿವ, ಪಾರ್ವತಿ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ..

Video Top Stories