Asianet Suvarna News Asianet Suvarna News

ಅಲಿಬಾಗ್‌ನಲ್ಲಿ ಭೂಮಿ ಖರೀದಿಸಿದ ಸುಹಾನಾ ಖಾನ್‌: ಕೃಷಿಯತ್ತ ಶಾರುಖ್‌ ಪುತ್ರಿ !

ನಟಿ ಸುಹಾನಾ ಖಾನ್‌ ಅಲಿಬಾಗ್‌ನಲ್ಲಿ ಭೂಮಿ ಖರೀದಿಸಿದ್ದು, ಅಲ್ಲಿ ಕೃಷಿ ಮಾಡುತ್ತಾರಂತೆ.
 

First Published Jun 24, 2023, 11:55 AM IST | Last Updated Jun 24, 2023, 11:55 AM IST

ನಟಿ ಸುಹಾನಾ ಖಾನ್‌ ಸುಮಾರು 12.91 ಕೋಟಿ ರೂ.ಗೆ ಅಲಿಬಾಗ್‌ನಲ್ಲಿ ಜಾಗವನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಈ ಸ್ಥಳದ ನೋಂದಣಿಯನ್ನು ಜೂನ್ 1 ರಂದು ಮಾಡಲಾಗಿದ್ದು, ರಿಜಿಸ್ಟ್ರೇಷನ್ ಶುಲ್ಕಕ್ಕಾಗಿ 77.46 ಲಕ್ಷಗಳನ್ನು ಪಾವತಿಸಲಾಗಿದೆ. ಅಲ್ಲದೇ ಅವರು ಈ ಜಾಗದಲ್ಲಿ ಕೃಷಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕೆಲವರು ಕೃಷಿ ಬಗ್ಗೆ ಅವರಿಗೇನು ಗೊತ್ತು, ಅಲ್ಲಿ ರೆಸಾರ್ಟ್‌ ಕಟ್ಟುತ್ತಾರೆ ಅಷ್ಟೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸುಮಾರು ಒಂದೂವರೆ ಎಕರೆ ಜಮೀನನ್ನು ಸುಹಾನಾ ಖಾನ್ ಖರೀದಿಸಿದ್ದಾರೆ. ಸುಹಾನಾ ಈ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಇದನ್ನೂ ವೀಕ್ಷಿಸಿ: ಅಮೆರಿಕಾದ ಯುವಕರು 'ನಾಟು ನಾಟು' ಹಾಡಿಗೆ ಡ್ಯಾನ್ಸ್‌ ಮಾಡುತ್ತಿದ್ದಾರೆ: ಮೋದಿ

Video Top Stories