
ಅಮೆರಿಕಾದ ಯುವಕರು 'ನಾಟು ನಾಟು' ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ: ಮೋದಿ
ಕಳೆದ ರಾತ್ರಿ ಅಮೆರಿಕಾದಲ್ಲಿನ ಆಡಳಿತ ಶಕ್ತಿಕೇಂದ್ರ ಶ್ವೇತಭವನದಲ್ಲಿ ನಡೆದ ಔತಣಕೂಟದಲ್ಲಿ ನಾಟು ನಾಟು ಹಾಡಿನ ಬಗ್ಗೆ ವಿಶೇಷ ಭಾಷಣದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ನಾಟು ನಾಟು ಹಾಡಿಗೆ ಅಮೆರಿಕನ್ನರು ಹೆಜ್ಜೆ ಹಾಕುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅಮೆರಿಕಾದಲ್ಲಿ ಹೇಳಿದ್ದಾರೆ. ಭಾರತ ಮತ್ತು ಅಮೆರಿಕದ ಬಾಂಧವ್ಯದ ಕುರಿತು ಮಾತನಾಡುವಾಗ ಮೋದಿ ಈ ರೀತಿ ಹೇಳಿದ್ದಾರೆ. ನಾವೀಗ ಒಬ್ಬನ್ನೊಬ್ಬರ ಹೆಸರನ್ನು ಸರಿಯಾಗಿ ಉಚ್ಚರಿಸಲು ಪ್ರಾರಂಭಿಸಿದ್ದೇವೆ. ಅಲ್ಲದೇ ಭಾರತೀಯ ಮಕ್ಕಳು ಹ್ಯಾಲೋವೀನ್‌ನಲ್ಲಿ ಸ್ಪೈಡರ್ ಮ್ಯಾನ್‌ಗಳಾಗುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಈ ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಅಮೆರಿಕಾದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದಾರೆ. ಒಟ್ಟಿನಲ್ಲಿ ಮೋದಿ ಕೂಡ ಈ ಹಾಡಿಗೆ ಫಿದಾ ಆಗಿದ್ದಾರೆ ಅನಿಸುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ಣೂ ವೀಕ್ಷಿಸಿ: ಕಲರಿಪಯಟ್ಟು, ಕುದುರೆ ಸವಾರಿ ಕಲಿಕೆಯಲ್ಲಿ ರಿಷಬ್ ಶೆಟ್ರು: ಯಾಕೆ ಗೊತ್ತಾ ?