'ಶುಗರ್ ಫ್ಯಾಕ್ಟರಿ' ಎರಡನೇ ಟ್ರೈಲರ್ ರಿಲೀಸ್..! 'ಕೃಷ್ಣಾ'ವತಾರಕ್ಕೆ ನಿಖಿಲ್ ಕುಮಾರಸ್ವಾಮಿ ಬೌಲ್ಡ್!
ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕೃಷ್ಣನ ಅವತಾರಗಳನ್ನ ತೆರೆ ಮೇಲೆ ತಂದ ಸ್ಟಾರ್. ಕನ್ನಡದಲ್ಲಿ ಈಗಿನ ಲವ್ ಸಿನಿಮಾಗಳ ಸರದಾರ ಈ ಕೃಷ್ಣ. ಮೊನ್ನೆ ಮೊನ್ನೆಯಷ್ಟೆ ಕೌಸಲ್ಯಾ ಸುಪ್ರಜಾ ರಾಮ ಅಂತ ಕೃಷ್ಣನ ಜಪ ಮಾಡಿದ್ದ ನೀವೆಲ್ಲಾ ಈಗ ಡಾರ್ಲಿಂಗ್ ಕೃಷ್ಣ ಓಪನ್ ಮಾಡಿರೋ ಶುಗರ್ ಫ್ಯಾಕ್ಟರಿಗೆ ಭೇಟಿ ಕೊಡೋ ಟೈಂ ಬಂದಿದೆ.
ಈ ಶುಗರ್ ಫ್ಯಾಕ್ಟರಿ ಸಿಕ್ಕಾಪಟ್ಟೆ ಸ್ವೀಟ್ ಜೊತೆ ಹಾಟ್ ಕೇಕ್ ಅಂತ ಈ ಹಿಂದೆ ಬಂದ ಮೊದಲ ಟ್ರೈಲರ್(Trailer) ಹೇಳಿತ್ತು. ಈ ಟ್ರೈಲರ್ ನೋಡಿದವ್ರು ಡಾರ್ಲಿಂಗ್ ಕೃಷ್ಣ(Darling Krishna) ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಗದ್ದಲ ಮಾಡೋದು ಪಕ್ಕಾ ಅಂತ ಹೇಳಿದ್ರು. ಶುಗರ್ ಫ್ಯಾಕ್ಟರಿಯಲ್ಲಿ(Sugar Factory movie) ಸಿಕ್ಕಾಪಟ್ಟೆ ಸ್ವೀಟ್ ಜೊತೆ ಆಗಾಗ ಕಾರವೂ ಇದೆ ಅಂತ ಈಗ ರಿಲೀಸ್ ಆಗಿರೋ ಎರಡನೇ ಟ್ರೈಲರ್ ಹೇಳ್ತಿದೆ. ಈ ಟ್ರೈಲರ್‌ನನ್ನ ನಟ ನಿಖಿಲ್ ಕುಮಾರಸ್ವಾಮಿ ರಿಲೀಸ್ ಮಾಡಿದ್ರು. ಈ ಟ್ರೈಲರ್‌ನಲ್ಲಿ ಸೋನಲ್ ಮಂಥೋರೋ, ಅಧ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ಜೊತೆ ಡಾರ್ಲಿಂಗ್ ಕೃಷ್ಣನ ಕೃಷ್ಣಾವತಾರಕ್ಕೆ ನಿಖಿಲ್ ಬೌಲ್ಡ್ ಆಗಿದ್ರು. ಅಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನ ಲವ್ ಸಿನಿಮಾಗಳ ಸರದಾರ ನೆನಪಿರಲಿ ಪ್ರೇಮ್ ಕೂಡ ಶುಗರ್ ಫ್ಯಾಕ್ಟರಿ ಎರಡನೇ ಟ್ರೈಲರ್ ರಿಲೀಸ್‌ಗೆ ಬಂದಿದ್ರು. ಪ್ರೇಮ್ ಈ ಪ್ಯೂರ್ ಲವ್ ಸ್ಟೋರಿ ಟ್ರೈಲರ್ ನೋಡಿ ಶುಗರ್ ಫ್ಯಾಕ್ಟರಿ ಪ್ರೇಕ್ಷಕರಿಗೆ ಪಕ್ಕಾ ಸಿಹಿಯಾಗಿರುತ್ತೆ ಅಂತ ಹೇಳಿದ್ರು. ಶುಗರ್ ಫ್ಯಾಕ್ಟರಿ ಸಿಹಿಯ ಕಾರ್ಖಾನೆ. ಅಫ್ ಕೋರ್ಸ್ ಈ ಸಿನಿಮಾದಲ್ಲಿ ಸಿಹಿಯಾದ ಪ್ರೀತಿ ತುಂಬಿದೆ. ಯುತ್ಸ್‌ಗೆ ಅದ್ಯಾವಾಗ ಯಾರ್ ಮೇಲೆ ಹೇಗೆ ಲವ್ ಆಗುತ್ತೋ ಗುತ್ತಾಗಲ್ಲ. ಅಟ್ ದಿ ಸೇಮ್ ಟೈಂ ಹೇಗೆ ಬ್ರೇಕಪ್ ಆಗಿತ್ತೆ ಅಂತಲೂ ಹೇಳೋಕಾಗಲ್ಲ. ರೀಸನ್ ಅಲ್ಲದ ರೀಸನ್ಗೆ ಲವ್ ಆಗುತ್ತೆ ಬ್ರೇಕಪ್ ಆಗುತ್ತೆ. ಇಂತಹ ಹ್ಯಾಪನಿಂಗ್ ಕತೆಯ ಸಿನಿಮಾ ಶುಗರ್ ಫ್ಯಾಕ್ಟರಿ.
ಇದನ್ನೂ ವೀಕ್ಷಿಸಿ: ಕಾಂತಾರ 2 ಮುಹೂರ್ತಕ್ಕೆ ಅಸ್ತು ಎಂದ ಪಂಜುರ್ಲಿ, ಗುಳಿಗ: 14ನೇ ಸೆಂಚುರಿಯಿಂದ ಶುರುವಾಗುತ್ತೆ ಸ್ಟೋರಿ..!