ಕಾಂತಾರ 2 ಮುಹೂರ್ತಕ್ಕೆ ಅಸ್ತು ಎಂದ ಪಂಜುರ್ಲಿ, ಗುಳಿಗ: 14ನೇ ಸೆಂಚುರಿಯಿಂದ ಶುರುವಾಗುತ್ತೆ ಸ್ಟೋರಿ..!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಿಗ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ. ಅದೇ ರಿಷಬ್ ಕಲ್ಪನೆಯ ಕಾಂತಾರ ಪ್ರೀಕ್ವೆಲ್ ಕಥೆಗೆ ಮುಹೂರ್ತ ಮಾಡಲು ಡೇಟ್ ಫಿಕ್ಸ್ ಆಗಿದೆಯಂತೆ.
ಕಾಂತಾರ ಪ್ರೀಕ್ವೆಲ್ ಚಿತ್ರೀಕರಣಕ್ಕೆ ಆಲ್ ಸೆಟ್ ಆಗಿದೆ. ರಿಷಬ್ ಶೆಟ್ಟಿ(Rishab Shetty) ಎನ್ನೇನಿದ್ರು ಕ್ಯಾಮೆರಾ ಹಿಡಿದು ಕೆರಾಡಿ ಊರಿಗೆ ಹೋಗ್ಬೇಕಷ್ಟೆ. ಆದ್ರೆ ಈ ಸಿನಿಮಾ ಮುಹೂರ್ತಕ್ಕೆ(Muhurta) ಇಷ್ಟು ದಿನ ಪಂಜುರ್ಲಿ, ಗುಳಿಗ ದೈವಗಳ ಅಪ್ಪಣೆ ಸಿಕ್ಕಿರಲಿಲ್ಲ. ಈಗ ಪಂಜುರ್ಲಿ, ಗುಳಿಗ ದೈವಗಳು ಕಾಂತಾರ 2( Kantara 2) ಮುಹೂರ್ತಕ್ಕೆ ಅಸ್ತು ಎಂದಿವೆ. ಹೀಗಾಗಿ ಶೆಟ್ರು ಕಾಂತಾರ ಚಾಪ್ಟರ್2 ಮುಹೂರ್ತಕ್ಕೆ ಸ್ಥಳ ದಿನಾಂಕ ಫಿಕ್ಸ್ ಮಾಡಿದ್ದಾರೆ. ಕುಂದಾಪುರ ಆನೆಗುಡ್ಡೆಯ ವಿಘ್ನೇಶ್ವರನ(Vigneshwar of Anegudde) ಸನ್ನಿಧಿಯಲ್ಲಿ ಕಾಂತಾರ 2 ಮುಹೂರ್ತ ನಡೆಯಲಿದೆ. ರಿಷಬ್ ಶೆಟ್ಟಿ ಟೀಂ ಸಕಲ ರೀತಿಯಲ್ಲೂ ಸಜ್ಜಾಗಿದೆ. ಹೊಸ ವರ್ಷದಿಂದ ಹೊಸ ಹುರುಪಿನೊಂದಿಗೆ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಹೋಗೋಕೆ ಶೆಟ್ರು ತಂಡ ರೆಡಿ ಇದೆ. ಆದ್ರೆ ಅದಕ್ಕೂ ಮೊದಲು ನವೆಂಬರ್ 27ರಂದು ಕಾಂತಾರ ಪ್ರೀಕ್ವೆಲ್ ಕಥೆಗೆ ಮುಹೂರ್ತ ನಡೆಯಲಿದೆ. ಕಾಂತಾರ ಚಾಪ್ಟರ್ 1 ಸಿನಿಮಾಗೂ ಆನೆ ಗುಡ್ಡೆಯಲ್ಲಿ ಗಣಪತಿ ಸನ್ನಿಧಿಯಲ್ಲೇ ಮುಹೂರ್ತ ನಡೆದಿತ್ತು. ಈಗ ಅದೇ ದೇವರ ಮುಂದೆ ಕಾಂತಾರ2 ಗೂ ಸ್ಕ್ರೀಪ್ಟ್ ಪೂಜೆ ಹಾಗೂ ಮುಹೂರ್ತ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರೋ ಕಾಂತಾರದ ಪ್ರೀಕ್ವೆಲ್ ಸ್ಟೋರಿ ಕಾಂತಾರ ಪಾರ್ಟ್ 2 ಅನ್ನೋದು ನಿಮ್ಗೆಲ್ಲಾ ಗೊತ್ತು. ಈ ಸಿನಿಮಾದಲ್ಲಿ ಕಾಡುಬೆಟ್ಟ ಶಿವನ ಅಪ್ಪನ ಪಾತ್ರ ಮಾಡ್ತಿದ್ದಾರೆ ಶೆಟ್ರು. ಹೀಗಾಗಿ ಕಾಂತಾರ2 ಕಥೆ ಶುರುವಾಗೋದು 14ನೆ ಸೆಂಚುರಿಯಿಂದ. ದೈವಾರಾಧನೆ ಹೇಗೆ ಶುರುವಾಯ್ತು.? ಕರಾವಳಿಯಲ್ಲಿ ದೈವಾರದನೆ ಬೆಳೆದಿದ್ದು ಹೇಗೆ..? ಧೈವಾರಾಧನೆ ಎಷ್ಟು ಮುಖ್ಯ..? ಮತ್ತು ಅದರ ಫಲ ಏನು..? ದೈವಾರಧನೆಯಲ್ಲಿ ಆದ ಘಟನೆಯಗಳನ್ನ ಸಿನಿಮಾದಲ್ಲಿ ಹೇಳಲಾಗುತ್ತೆ. ಹೀಗಾಗಿ ಈ ಕಥೆಯನ್ನ ಹುಡುಕಲು 20 ಜನರ ತಂಡ ಮಾಡಿ ಬಿಟ್ಟಿದ್ರು ರಿಷಬ್. ಈಗ ಆ 20 ಜನರ ತಂಡ ಕಲೆ ಹಾಕಿರೋ ಎಲ್ಲಾ ಮಾಹಿತಿಯನ್ನಿಟ್ಟುಕೊಂಡು ಕಾಂತಾರ2 ಪ್ರೀಕ್ವೆಲ್‌ಗೆ ಕಥೆ ರೆಡಿಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ರಿಷಬ್ ಶೆಟ್ಟಿ ಈ ವರ್ಷ ಕಾಂತಾರ 2 ಶೂಟಿಂಗ್ ಹೋಗಲ್ಲ: ಹೊಸ ವರ್ಷಕ್ಕೆ ಹೊಸ ಯೋಜನೆ ಜತೆ ಬರ್ತಾರೆ ಶಿವ..!