Asianet Suvarna News Asianet Suvarna News

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುದೀಪ್; ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ದಂಪತಿ

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟ ಸುದೀಪ್ ಭೇಟಿ ಕೊಟ್ಟಿದ್ದಾರೆ. ಪತ್ನಿ ಪ್ರಿಯಾ ಜೊತೆ ಸುದೀಪ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟ ಸುದೀಪ್ ಭೇಟಿ ಕೊಟ್ಟಿದ್ದಾರೆ. ಪತ್ನಿ ಪ್ರಿಯಾ ಜೊತೆ ಸುದೀಪ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದ.ಕ ಜಿಲ್ಲೆಯ ಮಂಗಳೂರಿನಲ್ಲಿರುವ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುದೀಪ್ ಮಂಗಳೂರಿಗೆ ಭೇಟಿ ನೀಡಿದ್ದರು. ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮಕ್ಕಾಗಿ ಸುದೀಪ್ ಮಂಗಳೂರಿಗೆ ಭೇಟಿ ನೀಡಿದ್ದರು. ಸುದಾಪ್ ಮತ್ತು ಪ್ರಿಯಾ ಇಬ್ಬರೂ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಸುದೀಪ್‌ಗೆ ಆತ್ಮೀಯ ಗೌರವ ಸಮರ್ಪಣೆ ಮಾಡಲಾಯಿತು.