Vikrant Rona; ಕಿಚ್ಚ, ಅನೂಪ್ ಸೃಷ್ಟಿಯ ಹೊಸ ಪ್ರಂಪಚದ ದರ್ಶನ ಪಡೆದ ಫ್ಯಾನ್ಸ್ ಫಿದಾ

ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ವಿಕ್ರಾಂತ್ ರೋಣ. ಟೀಸರ್ ಮೇಕಿಂಗ್ ನಿಂದ ಧೂಳೆಬ್ಬಿಸಿದ್ದ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಆರು ಭಾಷೆಯಲ್ಲಿ ರಿಲೀಸ್ ಆಗಿದೆ. ಇಷ್ಟು  ದಿನಗಳಿಂದ ವಿಕ್ರಾಂತ್ ರೋಣನ ಆರ್ಭಟ ನೋಡಲು ಕಾದಿದ್ದ ಸಿನಿಮಾ ಪ್ರೇಮಿಗಳು ಟ್ರೇಲರ್ ನೋಡಿ ಕಂಣ್ತುಂಬಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ವಿಕ್ರಾಂತ್ ರೋಣ. ಟೀಸರ್ ಮೇಕಿಂಗ್ ನಿಂದ ಧೂಳೆಬ್ಬಿಸಿದ್ದ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಆರು ಭಾಷೆಯಲ್ಲಿ ರಿಲೀಸ್ ಆಗಿದೆ. ಇಷ್ಟು ದಿನಗಳಿಂದ ವಿಕ್ರಾಂತ್ ರೋಣನ ಆರ್ಭಟ ನೋಡಲು ಕಾದಿದ್ದ ಸಿನಿಮಾ ಪ್ರೇಮಿಗಳು ಟ್ರೇಲರ್ ನೋಡಿ ಕಂಣ್ತುಂಬಿಕೊಂಡಿದ್ದಾರೆ. ವಿಕ್ರಾಂತ್ ರೋಣ ನಾರ್ಮಲ್ ಸಿನಿಮಾ ಅಲ್ಲ. ಅದೊಂದು ಹೊಸ ಪ್ರಪಂಚ. ಅನೂಪ್ ಬಂಡಾರಿ ಹಾಗೂ ಕಿಚ್ಚ ಸೇರಿ ಕಟ್ಟಿರೋ ಈ ಹೊಸ ಪ್ರಪಂಚಕ್ಕೆ ಇಂದು ಸಿನಿಮಾ ಪ್ರೇಮಿಗಳಿಗೆ ಎಂಟ್ರಿ ಸಿಕ್ಕಿದೆ. ವಿಕ್ರಾಂತ್ ರೋಣನ ಜಗತ್ತಿನ ಒಂದು ಝಲಕ್ ನೋಡಿ ಪ್ರೇಕ್ಷಕ ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಆರು ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಟ್ರೇಲರ್ ಲಾಂಚ್ ಆಗಿದ್ದು ಸ್ಟಾರ್ ನಟರಾದ ಧನುಷ್ , ಸಲ್ಮಾನ್ ಕಾನ್, ರಾಮ್ ಚರಣ್ ಹಾಗೂ ದುಲ್ಕರ್ ಸಲ್ಮಾನ್ ಆಯಾ ಭಾಷೆಯಲ್ಲಿ ಟ್ರೇಲರ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ. ಶಾಲಿನಿ ಆರ್ಟ್ಸ್ ನಲ್ಲಿ ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹಾಕಿದ್ದು ಅನೂಪ್ ಬಂಡಾರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ , ನಿರೂಪ್ ಬಂಡಾರಿ. ನೀತಾ ಸೇರಿದಂತೆ ಇನ್ನು ಅನೇಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ. 

Add Asianetnews Kannada as a Preferred SourcegooglePreferred

Related Video